ಸುದ್ದಿಬಿಂದು ಬ್ಯೂರೋ ವರದಿ
ಧಾರವಾಡ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿದ ನಂತರ, ಕುಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿಯನ್ನು ತೊರೆಯಬೇಕು ಎಂದು ಕರೆ ನೀಡಿದ್ದಾರೆ.
ಯತ್ನಾಳ್ ಉಚ್ಛಾಟನೆ ತಕ್ಷಣ ಹಿಂದಕ್ಕೆ ಪಡೆಯಿಲ್ಲದಿದ್ದರೆ, ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿಯಿಂದ ಹೊರಬರಬೇಕು ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.
ಯತ್ನಾಳ್ ಎಂದೂ ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಶಕ್ತಿಗಳು ಅವರನ್ನು ಹೊರಹಾಕಲು ಕಾರಣವಾಗಿವೆ. ಕುಟುಂಬ ರಾಜಕಾರಣವನ್ನು ವಿರೋಧಿಸುವುದು ತಪ್ಪೇ? ಯತ್ನಾಳ್ ಮಾತನಾಡಿದರೆ, ಉತ್ತರ ಕರ್ನಾಟಕ ಮತ್ತು ಹಿಂದೂತ್ವದ ವಿಷಯಗಳನ್ನಷ್ಟೇ ಮಾತನಾಡಿದ್ದಾರೆ.
ಯತ್ನಾಳ್ ಅವರನ್ನು ಉಚ್ಛಾಟಿಸುವ ಮೂಲಕ, ಬಿಜೆಪಿಯೇ ತನ್ನ ಕಾಲಿಗೆ ಕಲ್ಲು ಹೊಡೆದುಕೊಂಡಂತಾಗಿದೆ. ಇದು ಬಿಜೆಪಿಗೆ ಹಿನ್ನಡೆಯಾಗಲಿದೆ. ಈಗ ಬಿಜೆಪಿ 60ಸ್ಥಾನಕ್ಕೆ ಬಂದು ನಿಂತಿದೆ. ಮುಂದಿನ ಚುನಾವಣೆಯಲ್ಲಿ 30ಸ್ಥಾನ ಸಹ ಸಿಗುವ ಸಾಧ್ಯತೆ ಇಲ್ಲ. ಮೋದಿ ಮತ್ತು ಅಮಿತ್ ಶಾ ಅವರಿಗೆ ಈ ವಿಷಯಗಳ ಬಗ್ಗೆ ಅರಿವು ಇಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ