ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಇಬ್ಬಾಗದ ಪ್ರಸ್ತಾವನೆ ಸದ್ಯಕ್ಕೆ ಸರಕಾರದ ಮುಂದೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಸ್ಪಷ್ಟ ಪಡಿಸಿದ್ದಾರೆ.
ಅವರು ಇಂದು ಕಾರವಾರದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿ ಸುದ್ದಿಗೋಷ್ಟಿಯನ್ನ ಉದ್ದೇಶಿ ಮಾತನಾಡಿದ ಸಚಿವರ ಎದುರು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ನಮ್ಮ ಸರಕಾರ ಮುಂದೆ ಸದ್ಯ ಜಿಲ್ಲೆ ಇಬ್ಬಾಗದ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ.ಈ ಬಗ್ಗೆ ನಾವು ಎಲ್ಲಿಯೂ ಚರ್ಚೆ ಮಾಡಿಲ್ಲ.ಬಜೆಟ್‌ನಲ್ಲಿ ಬಂದಿಲ್ಲ.ಆಗಾಗ ಇತರಹ ಸುದ್ದಿಗಳನ್ನ ಹಬ್ಬಿಸುತ್ತಿರುತ್ತಾರೆ.ಆ ರೀತಿ ಯಾವುದೇ ನಡೆದಿಲ್ಲ..
ಕೆಲವರು ಇಬ್ಬಾಗ ಆಗಬೇಕು ಅಂತಾರೆ. ಇನ್ನೂ ಕೆಲವರು ಬೇಡ ಅಂತಾರೆ, ಈ ಬಗ್ಗೆ ಮುಂದಿನ ದಿನದಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡಬೇಕಿದೆ.ಬೇಕು,ಬೇಡ ಎನ್ನುವ ಬಗ್ಗೆ ಚರ್ಚೆ ಆಗತ್ತಿದೆ..ಈ ಬಗ್ಗೆ ಮುಂದೆ ನೋಡೋಣ ಎಂದು ಹೇಳಿದರು.
ಇನ್ನಷ್ಟು ಓದಿ