ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಬಿಜೆಪಿಯಲ್ಲಿರುವ 8 ಶಾಸಕರು ಕಾಂಗ್ರೇಸ್‌ಗೆ ಬರಲಿದ್ದಾರೆಂದು ಎಸ್ ಟಿ ಸೋಮಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾಂಗ್ರೇಸ್‌ಗೆ ಬರುವವರು 8 ಶಾಸಕರಲ್ಲ 18ಶಾಸಕರು ಅದರಲ್ಲಿ ಶಿವರ ಹೆಬ್ಬಾರ್ ಕೂಡ ಕಾಂಗ್ರೇಸ್‌ಗೆ ಬರಬೇಕು ಅಂತಾ ಹೇಳಿದ್ದರು.

ಶಿರಸಿಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಹುಟ್ಟುಹಬ್ಬ ಗೌರವ ನಮನ ಸಲ್ಲಿಸಿದ ಬಳಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಮಾಧ್ಯಮದವರು ಬಿಜೆಪಿಯ 8ಶಾಸಕರು ಕಾಂಗ್ರೇಸ್‌ಗೆ ಬರಲಿದ್ದಾರೆ ಅಂತಾ ಹೇಳಿಕೆ ನೀಡಿದ್ದಾರೆ. ಇದು ನಿಜವಾ ಅಂತಾ ಪ್ರಶ್ನೆ ಹಾಕಿದ್ದರು.

ಇದಕ್ಕೆ ಪ್ರತಿಕ್ರೀಯೆ ನೀಡಿದ ಸಚಿವ ಮಧುಬಂಗಾರಪ್ಪ ಅವರು 8ಅಲ್ಲ 18ಇರಬೇಕು ಸ್ವಲ್ಪ ಇನ್ನೊಮ್ಮೆ ಗಮನಿಸಿ,ಅಲ್ಲಿ‌ ಉಳಿದುಕೊಂಡಿರೋದೆ 18ಶಾಸಕ‌ರು ಮಾತ್ರ.ನಿಮ್ಮ ಜಿಲ್ಲೆಯ ಶಾಸಕ ಶಿವರಾಮ ಹೆಬ್ಬಾರ್ ಸಹ ಬರಲಿದ್ದಾರೆ.ಅವರು ಬರಬೇಕು ಅವರು‌ ಬರೋದಕ್ಕೆ ತುಂಬಾ ವಿಳಂಬ ಮಾಡತ್ತಿದ್ದಾರೆ.ಬೇಗ ಬರಬೇಕು,
ಹೆಬ್ಬಾರ ಕಾಂಗ್ರೇಸ್‌ನಿಂದಲ್ಲೇ ಬಿಜೆಪಿಗೆ ಹೋದವರಲ್ವಾ ಎಲ್ಲರೂ ವಾಪಸ್ ಬರತ್ತಾರೆ.

ಗಮನಿಸಿ