ಸುದ್ದಿಬಿಂದು ಬ್ಯೂರೋ
ಕಾರವಾರ :ಪ್ರವಾಸಿಗರನ್ನ ಹೊತ್ತೊಯ್ಯುತ್ತಿದ್ದ ಬೋಟ್ ಮಳುಗಡೆಯಾಗಿ ಅದರಲ್ಲಿದ್ದ 278 ಪ್ರವಾಸಿಗರ ಪೈಕಿ 78 ಮಂದಿ ನೀರು ಪಾಲಾಗಿರುವ ಘಟನೆ ಆಫ್ರಿಕನ್ ರಾಷ್ಟ್ರ ಪೂರ್ವ ಕಾಂಗೋದ ಕಿವು ಸರೋವರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು.ಗೋವಾದಲ್ಲಿ ನಡೆದ ಘಟನೆ ಎಂದು ವೈರಲ್ ಆಗತ್ತಾ ಇದೆ.

ಸಾಮರ್ಥ್ಯ ಮೀರಿದ ಪ್ರವಾಸಿಗರನ್ನ ತುಂಬಿದ್ದ ಹಡಗು ಶಾಂತ ನೀರಿನಲ್ಲಿ ಮುಳುಗುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.ಇನ್ನೂ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಪ್ರಾದೇಶಿಕ ಅಧಿಕಾರಿಗಳು ವ್ಯತಿರಿಕ್ತ ಸಾವಿನ ಸಂಖ್ಯೆಯನ್ನು ನೀಡುತ್ತಿದ್ದಾರೆ. ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್, ಸಾವಿನ ಸಂಖ್ಯೆ 78 ಮತ್ತು 278 ಜನರು ಬೋಟ್ ನಲ್ಲಿದ್ದರು ಎಂದು ಹೇಳಿದ್ದಾರೆ.

ಗಮನಿಸಿ