ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಚಲಿಸುತ್ತಿದ್ದ ಸ್ಕೂಟಿ‌ ಒಂದಕ್ಕೆ‌ ಕಾರು ಡಿಕ್ಕಿ‌ ಹೊಡೆದು ಸ್ಕೂಟಿ ಸವಾರ ಗಾಯಗೊಂಡಿರುವ ಘಟನೆ ಪಟ್ಟಣದ APMC ಬಳಿ ನಡೆದಿದೆ.

ಹೆರವಟ್ಟಾ ಮೂಲದ ವ್ಯಕ್ತಿ ಓರ್ವ ಕುಮಟಾ ಕಡೆಯಿಂದ ಹೊನ್ನಾವರ ಕಡೆ ಸ್ಕೂಟಿಯಲ್ಲಿ ಚಲಿಸುತ್ತಿದ್ದ, ಈ ವೇಳೆ ಆತ‌ನ ಹಿಂಬದಿಯಿಂದ ಅತೀ ವೇಗವಾಗಿ ಬಂದ‌ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಇದರಿಂದ ಸ್ಕೂಟಿ ಸವಾರ ಕಾರಿಗಿಂತ‌ ಮೇಲೆ ಹಾರಿ ನೆಲಕ್ಕೆ‌ ಬಿದ್ದಿದ್ದಾನೆ.ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದರಿಂದಾಗಿ ಆತ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ‌ ನಡೆದಿದೆ.

ಗಮನಿಸಿ