ಸುದ್ದಿಬಿಂದು ಬ್ಯೂರೋ ವರದಿ
ಜಮೀನು ವಿಚಾರಕ್ಕೆ ಸಂಬಂಧಿಸಿ ಇಬ್ಬರೂ ವ್ಯಕ್ತಿಗಳು ತಹಶೀಲ್ದಾರ ಕಚೇರಿಯ ಆವರಣದಲ್ಲೇ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ.

ಜಾಗದ ವಿಚಾರವಾಗಿ ಇಬ್ಬರ ನಡವೆ ತಹಶೀಲ್ದಾರ ಕಚೇರಿಯಲ್ಲಿ ಮೊದಲು ಮಾತಿಗೆ ಮಾತು ಉಂಟಾಗಿದೆ ಬಳಿಕ ಇಬ್ಬರೂ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಆರಂಭಿಸಿದ್ದು ಹೊಡೆದಾಟದವರೆಗೂ ತಲುಪಿದೆ.ಕಚೇರಿಯ ಆವರಣದಲ್ಲಿ ಹೊಡೆದಾಡಿಕೊಳ್ಳುತ್ತಿರುವುದನ್ನ ಗಮನಿಸಿದ ತಹಸಿಲ್ದಾರ್ ಶೋಭಾ ಲಕ್ಷ್ಮಿ ಯವರು ಆಗಮಿಸಿ ಗಲಾಟೆ ಮಾಡಿಕೊಂಡವರನ್ನು ಕಚೇರಿಯ ಕಾಂಪೌಂಡಿನ ಹೊರಗಡೆ ಹೋಗುವಂತೆ ಸೂಚನೆ ನೀಡಿದ್ದರು..

ತಹಶೀಲ್ದಾರ ‌ಕಚೇರಿಯ ಆವರಣದಲ್ಲಿ ಗಲಾಟೆ ನಡೆಯುತ್ತಿದೆ ಎನ್ನುವ ಸುದ್ದಿ ತಿಳಿದ ಕುಂದಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ‌.

ಗಮನಿಸಿ