ಸುದ್ದಿಬಿಂದು ಬ್ಯೂರೋ
ಶಿರಸಿ : ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದ ದಂಪತಿಗೆ ಕಾರಿಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಕಾರನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದು, ಆತನ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಾನಗೋಡ ಬಳಿ ನಡೆದಿದೆ.

ಅಪಘಾತದಲ್ಲಿ ಚಂದ್ರಶೇಖರ ಪಲ್ಲೇದ್ (60) ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದು, ಇನ್ನೂ ಅವರ ಪತ್ನಿ ಸುಜಾತ ಅವರಿಗೆ ಗಾಯವಾಗಿದೆ. ಇರುವ ಸಿದ್ದಾಪುರದ ಕೊಂಡ್ಲಿ ನಿವಾಸಿಯಾಗಿದ್ದಾರೆ. ಇವರು ಚಿಕಿತ್ಸೆಗಾಗಿ ಶಿರಸಿ ಆಸ್ಪತ್ರೆಗೆ ಬರುತ್ತಿದ್ದರು ಎನ್ನಲಾಗಿದೆ.

ಈ ವೇಳೆ ಶಿರಸಿ ಕಡೆಯಿಂದ ಸಾಗರಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಚಂದ್ರಶೇಖರ್ ಅವರ ತಲೆಗೆ ಗಾಯಗೊಂಡು ರಕ್ತಸ್ರಾವದಿಂದಾಗಿ ಅವರು ಮೃತ ಪಟ್ಟಿದ್ದಾರೆ. ಇನ್ನೂ ಅವರ ಪತ್ನಿಗೂ ಸಹ ಗಾಯವಾಗಿದ್ದು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಶಿರಸಿಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಿಸಿ