suddibindu.in
ಹೊನ್ನಾವರ : ಪಟ್ಟಣದ ವೆಂಕಟರಮಣ ದೇವಸ್ಥನದ ರಥಬೀದಿಯಲ್ಲಿ ಇರುವ ಕ್ಲಬ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿ ಹತ್ತಕ್ಕೂ ಹೆಚ್ಚು ಮಂದಿಯನ್ನ ಅರೆಸ್ಟ್ ಮಾಡಿರುವ ಘಟನೆ ನಡೆದಿದೆ.
ಕ್ಲಬ್‌ನಲ್ಲಿ ಜೂಜಾಟದಲ್ಲಿ ತೊಡಗಿದ್ದ, ಹತ್ತಕ್ಕೂ ಹೆಚ್ಚು ಮಂದಿ, 9 ಬೈಕ್ ಹಾಗೂ ಸಾವಿರಾರೂ ರೂಪಾಯಿ ಹಣವನ್ನ ದಾಳಿಯ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ.
ಎಂ ನಾರಾಯಣ ಅವರು ಉತ್ತರಕನ್ನಡ ಜಿಲ್ಲೆಗೆ ನೂತನ ಎಸ್ಪಿ ಆಗಿ ಬಂದ್ ಬಳಿಕ ಜಿಲ್ಲಾದ್ಯಂತ ಎಲ್ಲಾ ಕ್ಲಬ್‌ಗಳನ್ನ ಬಂದ್ ಮಾಡಲಾಗಿತ್ತು. ಆದರೆ ಹೊನ್ನಾವರದ ರಥಬೀದಿಯಲ್ಲಿ ಈ ಕ್ಲಬ್ ನಲ್ಲಿ ಅಲ್ಲಿರುವ ಸಿಸಿ ಕ್ಯಾಮರಾಗಳ ಸಹ ತೆಗೆದಿಟ್ಟು ನಿರಂತರವಾಗಿ ಕ್ಲಬ್ ನಡೆಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ನೇತೃದಲ್ಲಿ ಸಿಪಿಐ ತಿಮ್ಮಪ್ಪ ನಾಯ್ಕ ಹಾಗೂ ಹೊನ್ನಾವರ ಪೊಲೀಸರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ