suddibindu.in
ಕಾರವಾರ : ಅಮವಾಸ್ಯೆಯ ದಿನವೇ ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ಶೋಧ ಕಾರ್ಯಕ್ಕೆ ಬಂದವರು ಹಾಗೆ ವಾಪಸ್ ತೆರಳಿದ್ದಾರೆ. ಯಾಕಂದ್ರೆ ಅಮವಾಸ್ಯೆಯ ಶೋಧ ಕಾರ್ಯಾಚರಣೆಗೆ ಗಂಗಾವಳಿ ನದಿಯಲ್ಲಿನ ನೀರಿನ ಸೆಳೆತ ಅಡ್ಡಿಯಾಗಿದೆ. ಹೀಗಾಗಿ, ಈಶ್ವರ ಮಲ್ಪೆ ಮತ್ತವರ ಟೀಂ ಕೊಂಚ ನಿರಾಶೆಯಿಂದಲೇ ವಾಪಸ್ ಆಗಿದ್ದಾರೆ.
ಅಂದಹಾಗೆ, ಜುಲೈ 16 ರಂದು ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂ ಕುಸಿತ ಉಂಟಾಗಿತ್ತು. ಘಟನೆಯಲ್ಲಿ 11ಜನರು ನಾಪತ್ತೆಯಾಗಿದ್ದರು. ದುರ್ಘಟನೆಯಲ್ಲಿ ಬೃಹತ್ ಆಲದ ಮರಗಳು, ಬಂಡೆಗಲ್ಲುಗಳು, ಮಣ್ಣು, ಅಂಗಡಿ, ಮನೆ ನದಿಯನ್ನ ಸೇರಿಕೊಂಡಿವೆ. ಪಕ್ಕದ ಉಳುವರೆ ಗ್ರಾಮದ ಮನೆಗಳನ್ನ ಕೂಡ ದ್ವಂಸ ಮಾಡಿತ್ತು.
ಇದನ್ನೂ ಓದಿ
- ಚಿತ್ತಾಕೂಲಕ್ಕೆ ನೂತನ ಪಿಎಸ್ಐ ಆಗಿ ಪರಶುರಾಮ್ ಮಿರ್ಜಿಗಿ, ಮುಂಡಗೋಡಕ್ಕೆ ಮಾಹಾಂತೇಶ್ ವಾಲ್ಮೀಕಿ ನೇಮಕ
- ದಸರಾ ಉದ್ಘಾಟನೆ ವಿವಾದಕ್ಕೆ ಫುಲ್ಸ್ಟಾಪ್ : ಬಾನು ಮುಷ್ತಾಕ್ ಆಯ್ಕೆಗೆ ಹೈಕೋರ್ಟ್ ಹಸಿರು ನಿಶಾನೆ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
ಅಸಲು, ಈ ದುರಂತದ ಬಳಿಕ ರಕ್ಷಣಾ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಾಚರಣೆ ನಡೆದಿದೆ. NDRF, SDRF ಕಾರ್ಯಾಚರಣೆ ನಡಿಸಿದಲ್ಲದೆ ಈಶ್ವರ್ ಮಲ್ಪೆ ತಂಡ ಕೂಡ ಗಂಗಾವಳಿ ನದಿಯ ಆಳಕ್ಕೆ ಇಳಿದು ಎರಡು ದಿನಗಳ ಶೋಧ ನಡೆಸಿತ್ತು. ಆದ್ರೆ ಮೂವರ ಮೃತದೇಹ ಪತ್ತೆಯಾಗಿಲ್ಲ. ಹೀಗಾಗಿ ಇವತ್ತು ಅಮವಾಸ್ಯೆ ಆಗಿದ್ದರಿಂದ ನದಿಯ ನೀರು ಸಹಜಸ್ಥಿತಿಗೆ ಬರ ಬಹುದು ಎಂಬ ಕಾರಣಕ್ಕೆ ಈಶ್ವರ್ ಮಲ್ಪೆ ತಂಡ ಆಗಮಿಸಿತ್ತು. ಶೋಧ ಕಾರ್ಯಾಚರಣೆಗೆ ಬೇಕಾಗುವಂತ ದೋಣಿಗಳು, ಮೀನುಗಾರರು ಸಿದ್ದರಾಗಿದ್ದರು. ಆದರೆ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗದೆ ಇರೊಂದ್ರಿಂದ ಮಲ್ಪೆ ತಂಡ ಮತ್ತು ಮೀನುಗಾರರು ವಾಪಸ್ ಹೋಗಿದ್ದಾರೆ.
ದುರಂತದಲ್ಲಿ ಶಿರೂರಿನ ಜಗನ್ನಾಥ ನಾಯ್ಕ ಗಂಗೆಕೊಳ್ಳದ ಲೋಕೇಶ್ ನಾಯ್ಕ ಮತ್ತು ಕೇರಳದ ಅರ್ಜುನ್ ನಾಪತ್ತೆಯಾಗಿದ್ದಾರೆ. ಹೀಗಾಗಿ, ಆ ಮೂವರನ್ನೂ ಹುಡಕಲು ಈಶ್ವರ ಮಲ್ಪೆ ಪಣ ತೊಟ್ಟಿದ್ದಾರೆ.