suddibindu.in
ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಸೋಮವಾರ
ತಿಥಿ: ದಶಮಿ ತಿಥಿಯು ಬೆಳಿಗ್ಗೆ 1.43 ರವರೆಗೂ ಇದ್ದು ಅನಂತರ ಏಕಾದಶಿ ಆರಂಭವಾಗುತ್ತದೆ.

ನಕ್ಷತ್ರ: ಮೃಗಶಿರ ನಕ್ಷತ್ರವು ಬೆಳಿಗ್ಗೆ 1.24 ರವರೆಗೂ ಇರುತ್ತದೆ. ಅನಂತರ ಆರ್ದ್ರ ನಕ್ಷತ್ರ ಆರಂಭವಾಗುತ್ತದೆ.
ಸೂರ್ಯೋದಯ: ಬೆಳಿಗ್ಗೆ 6.43
ಸೂರ್ಯಾಸ್ತ: ಸಂಜೆ 6.23
ರಾಹುಕಾಲ: ಬೆಳಿಗ್ಗೆ 7.30 ರಿಂದ ಬೆಳಿಗ್ಗೆ 9.00
ಈ ದಿನದ ಅದೃಷ್ಟದ ಸಂಖ್ಯೆ :1-4-4-8

ಮೇಷ ರಾಶಿ : ಉದ್ಯೋಗದಲ್ಲಿನ ಬದಲಾವಣೆ ಅನುಕೂಲಕರವಾಗಿರುತ್ತದೆ. ಬಂಧು ಬಳಗದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ.ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇರುತ್ತದೆ. ಬೇರೆಯವರ ಮಾತನ್ನು ಸುಲಭವಾಗಿ ನಂಬದಿರಿ.ವಿದ್ಯಾರ್ಥಿಗಳಿಗೆ ಶಿಕ್ಷಕರ ಮೆಚ್ಚುಗೆ ಲಭಿಸುತ್ತದೆ. ಮಹಿಳಾ ಉದ್ಯಮಿಗಳಿಗೆ ಉತ್ತಮ ವರಮಾನವಿರುತ್ತದೆ.ಸಂಗಾತಿಗೆ ಅನಾರೋಗ್ಯ ಉಂಟಾಗುತ್ತದೆ. ವ್ಯಾಪಾರಸ್ಥರಿಗೆ ಶುಭ ಸಮಾಚಾರವೊಂದು ಬರಲಿದೆ.

ವೃಷಭ ರಾಶಿ : ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಕಲಿಕೆಯಲ್ಲಿ ಮುಂದುವರೆಯಲಿದ್ದಾರೆ. ಏಕಾಂಗಿಯಾಗಿ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಕುಟುಂಬದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಂಗಾತಿ ಪರಿಹರಿಸುತ್ತಾರೆ. ಸರಳ ಜೀವಿಗಳು. ಸಂಪಾದಿಸಿದ ಹಣವನ್ನು ಸಮಾಜ ಸೇವೆಯಲ್ಲಿ ಬಳಸುವಿರಿ. ಉದ್ಯೋಗದಲ್ಲಿ ಯಾವುದೇ ವಿಶೇಷ ಬದಲಾವಣೆಗಳು ಉಂಟಾಗುವುದಿಲ್ಲ. ಐಷಾರಾಮಿ ಜೀವನವನ್ನು ಇಷ್ಟಪಡುವುದಿಲ್ಲ.

ಮಿಥುನ ರಾಶಿ :ಹೊಸ ಬಗೆಯ ವಾಹನಗಳ ಮೇಲೆ ವಿಶೇಷ ಆಸೆ ಮೂಡಲಿದೆ. ಅನುಭವಿಗಳ ಮಾರ್ಗದರ್ಶನದಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ದಿಟ್ಟ ನಿರ್ಧಾರ ಕೈಗೊಳ್ಳುವಿರಿ.ಕುಟುಂಬದಲ್ಲಿ ಪರಸ್ಪರ ವಿಶ್ವಾಸದಿಂದ ಬಾಳುವಿರಿ. ಅನಾವಶ್ಯಕ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಉದ್ಯೋಗದಲ್ಲಿ ಸಕಾರಾತ್ಮಕ ತಿರುವುಗಳು ತಲೆದೋರಲಿವೆ. ವಿದ್ಯಾರ್ಥಿಗಳಿಗೆ ಕಲೆಯ ಬಗ್ಗೆ ಹೆಚ್ಚಿನ ಒಲವು ಮೂಡಲಿದೆ. ಆಟ ಪಾಠಗಳಲ್ಲಿಯೂ ಉನ್ನತ ಮಟ್ಟದಲ್ಲಿ ಮುಂದುವರೆಯುತ್ತಾರೆ.

ಕರ್ಕ ರಾಶಿ : ಅವಿವಾಹಿತರಿಗೆ ವಿವಾಹ ಯೋಗವಿದೆ. ಆದಾಯ ವ್ಯಯ ಸರಿಸಮಾನವಾಗಿರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಸೋದರಿಯ ಕುಟುಂಬದ ಆದಾಯ ಹೆಚ್ಚಲು ಕಾರಣರಾಗುವಿರಿ. ವಾಹನ ಚಾಲನೆಯ ವೇಳೆ ಎಚ್ಚರವಿರಲಿ. ಉದ್ಯೋಗಸ್ಥರಿಗೆ ವಿಶೇಷವಾದ ಅನುಕೂಲಗಳು ದೊರೆಯಲಿವೆ. ಅತಿಯಾದ ಆತುರದಿಂದ ತೊಂದರೆ. ಹಣಕಾಸಿನ ವಿಚಾರದಲ್ಲಿ ಮನಸ್ಸು ಬದಲಾಯಿಸದಿರಿ.

ಸಿಂಹ ರಾಶಿ : ಉದ್ಯೋಗದಲ್ಲಿನ ಕೆಲಸ ಕಾರ್ಯಗಳು ನಿಮ್ಮ ಗಮನಕ್ಕೆ ಬಾರದೆ ಹೋಗಬಹುದು. ಇದರಿಂದ ಹಿನ್ನೆಡೆಯು ಸಂಭವಿಸಬಹುದು. ವ್ಯಾಪಾರ ವ್ಯವಹಾರಗಳು ಕೇವಲ ಆತ್ಮತೃಪ್ತಿಗಾಗಿ ನಡೆಯಲಿವೆ. ವಿದ್ಯಾರ್ಥಿಗಳು ಸಮಯದ ಅಭಾವದಿಂದ ಹೆಚ್ಚಿನ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ಕಾಡಬಹುದು. ಶಿಸ್ತಿನ ಜೀವನ ನಡೆಸುವ ಕಾರಣ ಕೆಲಸ ಕಾರ್ಯಗಳು ತಡವಾಗಿ ನಡೆಯಲಿದೆ.

ಕನ್ಯಾ ರಾಶಿ: ರಾಜಕೀಯ ಪ್ರವೇಶಿಸುವ ಆಸೆ ಇದ್ದಲ್ಲಿ ಅವಕಾಶವೊಂದು ದೊರೆಯಲಿದೆ. ಜೀವನದ ಕಷ್ಟನಷ್ಟಗಳು ಕಡಿಮೆ ಆಗಲಿವೆ.ಸಮಯಕ್ಕೆ ತಕ್ಕಂತೆ ತೀರ್ಮಾನವನ್ನು ತೆಗೆದುಕೊಳ್ಳದೆ ಹೋದಲ್ಲಿ ಉದ್ಯೋಗಾವಕಾಶ ಕೈ ತಪ್ಪುವುದು. ವ್ಯಾಪಾರ ವ್ಯವಹಾರಗಳು ಅಡ್ಡಿ ಆತಂಕಗಳ ನಡುವೆ ನಡೆಯಲಿದೆ. ಆದರೂ ನಷ್ಟ ಉಂಟಾಗುವುದಿಲ್ಲ. ವಿದ್ಯಾರ್ಥಿಗಳನ್ನು ದಂಡಿಸುವ ಬದಲು ಸ್ಪೂರ್ತಿ ತುಂಬಿದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಅತಿಯಾದ ಓಡಾಟದಿಂದ ಬಳಲುವಿರಿ. ದಂಪತಿಗಳ ನಡುವಿನ ಸಮಸ್ಯೆಯೊಂದು ಬಗೆಹರಿಯುತ್ತದೆ.

ತುಲಾ ರಾಶಿ : ಸೋದರರ ನಡುವಿನ ಮಾತಿನ ವಿವಾದ ಶಮನಗೊಳ್ಳುತ್ತದೆ. ಬಳಸುತ್ತಿರುವ ವಾಹನವನ್ನು ಹೊಸ ವಾಹನಕ್ಕೆ ಬದಲಾಯಿಸುವಿರಿ.ಕಣ್ಣಿನ ತೊಂದರೆ ಲಘುವಾಗಿ ಭಾದಿಸಬಹುದು. ಉದ್ಯೋಗದಲ್ಲಿ ನಿಧಾನಗತಿಯ ತೀರ್ಮಾನಗಳು ಸುದೀರ್ಘವಾದ ಯಶಸ್ಸನ್ನು ನೀಡುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ತಕ್ಕಂತೆ ಲಾಭ ದೊರೆಯಲಿದೆ. ವಿದ್ಯಾರ್ಥಿಗಳು ಆಟ ಮನರಂಜನೆಯ ಜೊತೆಯಲ್ಲಿ ಕಲಿಕೆಯಲ್ಲಿಯೂ ಮುಂಚೂಣಿಯಲ್ಲಿ ಇರುತ್ತಾರೆ. ಪ್ರಾಚೀನ ವಸ್ತುಗಳ ಮೇಲೆ ವಿಶೇಷವಾದಂತಹ ಅಕ್ಕರೆ ಉಂಟಾಗುತ್ತದೆ.

ವೃಶ್ಚಿಕ ರಾಶಿ :ವ್ಯಾಪಾರದಲ್ಲಿ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಗೆಲುವೊಂದೆ ಗುರಿಯಾಗಿರುತ್ತದೆ. ಅತಿ ಆಸೆ ಇರದೆ ಹೋದರು ಗೆಲ್ಲಬೇಕೆಂಬ ಛಲವಿರುತ್ತದೆ.ಎಲ್ಲರ ನಿರೀಕ್ಷೆಯಂತೆ ಕೆಲಸ ಕಾರ್ಯಗಳ ರೀತಿಯನ್ನು ಬದಲಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕಗಳು ಕಂಡರೂ ಸಹನೆ ಕಳೆದುಕೊಳ್ಳುವಿರಿ. ಯಾರೊಬ್ಬರನ್ನು ಅವಲಂಬಿಸದೆ ಸ್ವಂತ ಬುದ್ಧಿಯಿಂದ ಕೆಲಸ ಕಾರ್ಯದಲ್ಲಿ ಜಯಶೀಲರಾಗುವಿರಿ. ಕಲಾವಿದರಿಗೆ ಉತ್ತಮ ಬದಲಾವಣೆ ಕಂಡುಬರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ನಿರೀಕ್ಷೆ ಇರುವುದಿಲ್ಲ.

ಧನು ರಾಶಿ : ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯದಿಂದ ಉನ್ನತ ಸ್ಥಾನ ಗಳಿಸುವಿರಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವಿದೆ. ಆರೋಗ್ಯದಲ್ಲಿ ಏಳುಬೀಳು ಸಹಜ.ಜನ್ಮಸ್ಥಳದಲ್ಲಿರುವ ಧಾರ್ಮಿಕ ಕೇಂದ್ರದ ಪುನರುಜ್ಜೀವನದ ನಿರ್ವಹಣೆ ನಿಮ್ಮದಾಗುತ್ತದೆ.ಸ್ತ್ರೀಯರಿಗೆ ವಿಶೇಷವಾದ ಫಲಗಳು ದೊರೆಯುತ್ತವೆ. ಸಂಗಾತಿಯ ಜೊತೆಗೂಡಿ ಸರ್ಕಾರಕ್ಕೆ ಸಂಬಂಧಿಸಿದ ಸೇವಾ ವೃತ್ತಿಯನ್ನು ಆರಂಭಿಸುವಿರಿ. ಸಾಲವಾಗಿ ಪಡೆದ ಹಣವನ್ನು ಮರುಪಾವತಿ ಮಾಡುವಿರಿ.

ಮಕರ ರಾಶಿ : ಮನೆಯಲ್ಲಿ ಅನಾವಶ್ಯಕವಾದ ವಾದ ವಿವಾದಗಳನ್ನು ಎದುರಿಸಬೇಕು. ಆಧುನಿಕ ತಂತ್ರಜ್ಞಾನ ಬಲ್ಲವರಿಗೆ ಸಂಸ್ಥೆಯೊಂದರ ಹೊಣೆಗಾರಿಕೆ ಲಭಿಸುತ್ತದೆ. ಹೆಚ್ಚಿನ ಶ್ರದ್ಧೆ ತೋರಿದಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸಬಹುದು.ಎಂದೋ ಮಾಡಿದ ತಪ್ಪಿಗಾಗಿ ಇಂದು ಹಣದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಸಂಬಂಧದವರಲ್ಲಿ ಇದ್ದ ಮನಸ್ತಾಪ ಕೊನೆಗೊಳ್ಳಲಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸದಿದ್ದರೆ ದಂಡ ತೆರಬೇಕಾಗುವುದು.

ಕುಂಭ ರಾಶಿ : ವ್ಯಾಪಾರ ವ್ಯವಹಾರಗಳಲ್ಲಿ ಸುಲಭವಾಗಿ ಹಣ ಸಂಪಾದಿಸುವಿರಿ. ಆದಾಯದ ಬಗ್ಗೆ ಹೆಚ್ಚಿನ ಆಸೆ ಇರದು. ಅಲ್ಪ ಆದಾಯದಲ್ಲಿಯೇ ಸುಖ ಸಂತೃಪ್ತಿ ಕಾಣುವಿರಿ.ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸುವ ಮೊದಲು ಒಮ್ಮೆ ಯೋಚಿಸಿ ಮುಂದುವರೆಯಬೇಕು. ಕುಟುಂಬದ ಸದಸ್ಯರು ಪರಸ್ಪರ ಅವಲಂಬಿತವಾಗಿರುತ್ತಾರೆ. ಅಸೂಯೆ ಪಡುವವರ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳು ಚರ್ಚಿಸುವುದಿಲ್ಲ. ಏಕಾಂಗಿತನದಿಂದ ಅಧ್ಯಯನದಲ್ಲಿ ಮುಂದುವರೆಯುತ್ತಾರೆ. ಸೋದರಿ ಅಥವಾ ಸೋದರಿಯ ಮಕ್ಕಳ ವಿವಾಹಕ್ಕೆ ಹಣವನ್ನು ಹೊಂದಿಸುವಿರಿ.

ಮೀನ ರಾಶಿ : ಧಾರ್ಮಿಕ ಕೇಂದ್ರಕ್ಕೆ ಆತ್ಮೀಯರ ಜೊತೆಯಲ್ಲಿ ಭೇಟಿ ನೀಡುವಿರಿ. ಸ್ವಂತ ಅನುಕೂಲಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಸಾರಿಗೆ ವ್ಯವಸ್ಥೆಯಲ್ಲಿ ಕಲ್ಪಿಸುವ ವ್ಯಾಪಾರದಲ್ಲಿ ಲಾಭವಿರುತ್ತದೆ. ಕುಟುಂಬದಲ್ಲಿ ಸ್ನೇಹಮಯ ವಾತಾವರಣದಲ್ಲಿ ಒಡಹುಟ್ಟಿದವರ ಸಲಹೆ ಪಡೆದುಕೊಂಡರೆ ಜೀವನದಲ್ಲಿ ಯಾವುದೇ ತೊಂದರೆ ಬಾರದು. ಉದ್ಯೋಗದಲ್ಲಿ ಸಮರ್ಪಕ ಕಾರ್ಯ ನಿರ್ವಹಣೆಯಿಂದ ಶುಭ ಫಲಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವಿರುತ್ತದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ಮುಂದುವರೆಯಬೇಕು.