suddibindu.in
ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಬಳಿ ವಾರದ ಹಿಂದೆ ಗುಡ್ಡ ಕುಸಿತವಾಗಿ ಅನೇಕರು ದಾರುಣವಾಗಿ ಸಾವನಪ್ಪಿದರೆ ಕೇರಳದ ಲಾರಿ ಸಹಿತ ಸ್ಥಳೀಯ ಕೆಲವರು ಕಣ್ಮರೆಯಾಗಿದ್ದಾರೆ. ಅವರನ್ನು ಹುಡುಕುವ ಕಾರ್ಯಾಚರಣೆ ಈಗಲೂ ನಡೆಯುತ್ತಿದೆ.ಈ ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ಸ್ಥಳದಲ್ಲಿ ಅಲ್ಪೋಪಹಾರ, ಊಟೋಪಚಾರದ ಸಮಸ್ಯೆಯಾಗಿತ್ತು. ಇದನ್ನು ಅರ್ಥೈಸಿಕೊಂಡ ಕಾರವಾರದ ಜನಪರ ನಾಯಕಿ, ಜೆಡಿಎಸ್ ಪಕ್ಷದ ಮುಖಂಡೆ ಚೈತ್ರಾ ಕೊಠಾರಕರ್ ಅವರು ಸ್ಥಳದಲ್ಲಿದ್ದವರಿಗೆ ಊಟೋಪಚಾರದ ವ್ಯವಸ್ಥೆ ಮಾಡುತ್ತಿದ್ದು, ಕಷ್ಟದಲ್ಲಿದ್ದವರ ಪಾಲಿಗೆ “ಅನ್ನಪೂರ್ಣೆ”ಯಾಗಿದ್ದಾರೆ.
ಚೈತ್ರಾ ಕೊಠಾರಕರ್ ಅವರು ಸದಾ ಬಡವರ ಕಷ್ಟಗಳಿಗೆ ಸ್ಪಂದಿಸುವರಾಗಿದ್ದು, ಯಾವತ್ತೂ ಜನಪರ ನಿಲ್ಲುವ ಜನನಾಯಕಿಯಾಗಿದ್ದಾರೆ. ಗುಡ್ಡ ಕುಸಿತದ ಸ್ಥಳದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಅಲ್ಲಿ ಕುಡಿಯಲು, ತಿನ್ನಲು ಏನೂ ಸಿಗುತ್ತಿರಲಿಲ್ಲ. ಎಲ್ಲವನ್ನೂ ಹೊರಗಿನಿಂದಲೇ ಪೂರೈಸಬೇಕಾದ ಸ್ಥಿತಿಯಿದೆ. ತನ್ನ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಮೂಲಕ ಊಟೋಪಚಾರದ ಮಾಹಿತಿ ಪಡೆದ ಚೈತ್ರಾ ಕೊಠಾರಕರ್ ಕೂಡಲೇ ಸ್ಥಳಕ್ಕೆ ಊಟೋಪಚಾರ ಪೂರೈಸಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಚೈತ್ರಾ ಅವರ ಕಾರ್ಯವನ್ನು ಅನೇಕರು ಪ್ರಶಂಸಿಸಿದ್ದು, ಅವರ ಸೇವೆ ಹೀಗೆಯೇ ಮುಂದುವರಿಯಲಿ, ಅವರಿಗೆ ಭಗವಂತ ಇನ್ನಷ್ಟು ಆರೋಗ್ಯ, ಐಶ್ವರ್ಯ ನೀಡಲಿ ಎಂದು ಸ್ಥಳೀಯರು ಹಾರೈಸಿದ್ದಾರೆ.