www.suddibindu.in
ಶಿರಸಿ : ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಸ್ನಲ್ಲಿದ್ದ ಸುಮಾರು 25ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಕುಮಟಾ ರಸ್ತೆಯಲ್ಲಿ ನಡೆದಿದೆ.

ಈ ಬಸ್ಸು ಮುರುಡೇಶ್ವರದಿಂದ ಶಿರಸಿ ಮಾರ್ಗವಾಗಿ ಹುಬ್ಬಳ್ಳಿ ಮೂಲಕ ಅಥಣಿಗೆ ಚಲಿಸುತ್ತಿದ್ದ ವೇಳೆ ಬೆಂಕಿ ಶಿರಸಿ ನಗರದಲ್ಲಿ ಬಸ್ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಪ್ರಯಾಣಿಕರು ಒಂದು ಕ್ಷಣ ಭಯಭೀತರಾಗಿದ್ದು, ತಕ್ಷಣ ಬಸ್ ಚಾಲಕ ಸ್ಥಳದಲ್ಲೇ ಬಸ್ ನಿಲ್ಲಿಸಿದ್ದು, ತಕ್ಷಣ ಬಸ್ ನಲ್ಲಿದ್ದ ಪ್ರಯಾಣಿಕರು ಬಸ್ ಇಳಿದಿದ್ದು, ಇದರಿಂದಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಯಾಣಿಕರು ಬಸ್ ನಿಂದ ಕೇಳಗೆ ಇಳಿಯುತ್ತಿದ್ದಂತೆ ಹಿಂಬದಿ ಟೈಯರ್ ಸ್ಪೋಟಗೊಂಡಿದೆ.
ಇದನ್ನೂ ಓದಿ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದು,ಪ್ರಯಾಣಿಕರನ್ನ ಬೇರೆ ಬಸ್ ನಲ್ಲಿ ಕಳುಹಿಸಲಾಗಿದೆ.