suddibindu.in
Koppala:ಕೊಪ್ಪಳ : ನನಗೆ ಮದುವೆ ಆಗುವ ಆಸೆಯಾಗಿದೆ. ದಯವಿಟ್ಟು ನನಗೆ ಕನ್ನೈ ಹುಡುಕಿಕೊಡಿ ಎಂದು ಯುವಕನೊಬ್ಬ ಜನಸ್ಪಂಧನಾ ಕಾರ್ಯಕ್ರಮದಲ್ಲಿ ಯುವಕನೊಬ್ಬ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಅಪರೂಪದ ಘಟನೆ ನಡೆದಿದೆ.
ಕೊಪ್ಪಳದ ಕನಕಗಿರಿ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಯುವಕನೋರ್ವ ಮನವಿ ಸಲ್ಲಿಸಿದ್ದಾನೆ. ಕನಕಗಿರಿ ಪಟ್ಟಣದ 3 ನೇ ವಾರ್ಡಿನ ಗೌಡರ ಓಣಿಯ ಸಂಗಪ್ಪ ಎನ್ನುವ ಯುವಕ ನಾನು ಹತ್ತು ವರ್ಷಗಳಿಂದ ಮದುವೆಯಾಗಲು ಕನ್ಯೆ ಹುಡುಕುತ್ತಿದ್ದು, ನಾನು ರೈತ ಎನ್ನುವ ಕಾರಣಕ್ಕಾಗಿ ನನಗೆ ಯಾರೂ ಕನ್ಯೆ ಕೊಡುತ್ತಿಲ್ಲ. ನನ್ನಂತೆ ಕನಕಗಿರಿಯಲ್ಲಿ ನೂರಾರು ಯುವಕರು ಇದ್ದು ಕನ್ಯೆ ಸಿಗದೆ ಪರದಾಡುತ್ತಿದ್ದಾರೆ. ದಯವಿಟ್ಟು ನನಗೆ ಕನ್ಯೆ ಕೊಡ್ಸಿ ಸ್ವಾಮಿ ಎಂದು ಜಿಲ್ಲಾಧಿಕಾರಿ ನಲೀನ್ ಅತುಲ್ ಅವರಿಗೆ ಮನವಿ ಸಲ್ಲಿಸಿದ್ದಾನೆ.
ಇದನ್ನೂ ಓದಿ
- ನಾಳೆ ಜಿಲ್ಲೆಯ ಈ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಫ್ರೌಢ ಶಾಲೆಗಳಿಗೆ ರಜೆ
- ನಾಳೆ ಜಿಲ್ಲಾದ್ಯಂತ ಎಲ್ಲಾ ಅಂಗನವಾಡಿ, ಶಾಲೆ-ಕಾಲೇಜುಗಳು ಎಂದಿನಂತೆ ಆರಂಭ
- ಭಾಸ್ಕೇರಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ನೆರವಾದ ಕಾಂಗ್ರೇಸ್ ಮುಖಂಡ ಮಂಜುನಾಥ ಎಲ್. ನಾಯ್ಕ
ಈ ವೇಳೆ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ನಗು ನಗುತ್ತಲೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅವರು ಇದು ಯಾವ ಇಲಾಖೆಗೆ ಬರುತ್ತೆ ಎಂದು ಅಧಿಕಾರಿಗಳಿಗೆ ಕೇಳಿದ್ದು ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಡಿಸಿ ನಲೀನ್ ಅತುಲ್ ಸಂಗಪ್ಪನ ರೈತ ಯುವಕನಿಗೆ ಬರವಸೆ ನೀಡಿದ್ದಾರೆ.