suddibindu.in
ಮಂಗಳೂರು : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಕೌಂಪೌಂಡ್ ಗೋಡೆ ಕುಸಿದು ಬಿದ್ದು ಮನೆ ನೆಲಸಮವಾಗಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ಮುನ್ನೂರು ಗ್ರಾಮದಲ್ಲಿ ನಸುಕಿನ ಜಾವ ನಡೆದಿದೆ.
ಯಾಸಿರ್ (45), ಅವರ ಪತ್ನಿ ಮರಿಯಮ್ಮ(40), ಮಕ್ಕಳಾದ ರಿಹಾನ(11), ರಿಫಾನ (17) ಮೃತಪಟ್ಟವರಾಗಿದ್ದಾರೆ.ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಪಕ್ಕದ ಮನೆಯ ಕಂಪೌಂಡ್ ಗೋಡೆ ಕುಸಿದು ಯಾಸಿರ್ ಮನೆಗೆ ಬಿದ್ದಿದೆ. ಇದರಿಂದಾಗಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಮಲಗಿದಲ್ಲೇ ದುರಂತ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ
- Lunar Eclipse 2025:ಸೆಪ್ಟಂಬರ್ 7ಕ್ಕೆ ಮಧ್ಯಾಹ್ನದ ಬಳಿಕ ಭೋಜನ ಮಾಡುವಂತಿಲ್ಲ
- ದೇಶಪಾಂಡೆ ಹೇಳಿಕೆ ವಿರುದ್ಧ ಎಲ್ಲೆಡೆ ಆಕ್ರೋಶ : ರಾಜೀನಾಮೆಗೆ ತೀವ್ರ ಒತ್ತಾಯ
- ಅಂಕೋಲಾದ ಹೊಟೇಲ್ ಒಂದರ ಮೇಲೆ ಹಠಾತ್ ದಾಳಿ : ಮಾಲೀಕರಿಗೆ ನೋಟಿಸ್ ಜಾರಿ
ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.