suddibindu.in
ಹೊನ್ನಾವರ : ಕಳೆದ ವರ್ಷ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಬಿಜೆಪಿ,ಜೆಡಿಎಸ್ ಅಭ್ಯರ್ಥಿಗಳ ನಡುವೆ ಪೈಪೋಟಿ ನೀಡಲು ಸಾಧ್ಯವಾಗದೆ, ಠೇವಣಿ ಕಳೆದುಕೊಂಡು ಮನೆ ಸೇರಿದರು.ಪಕ್ಷ ಛೀದ್ರ ಮಾಡುವ ಕೆಲಸ ಬಿಟ್ಟಿಲ್ಲ. ಇದಕ್ಕೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ನ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಒಂದು ಪಕ್ಷದಲ್ಲಿ ಯಾವುದೇ ಹುದ್ದೆ ತೆಗೆದುಕೊಳ್ಳಬೇಕಾದರೆ ಆ ಪಕ್ಷದ ಸದಸ್ಯತ್ವವನ್ನ ಪಡೆದಿರಬೇಕು. ಆದರೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರು ಸೇರಿದಂತೆ ಅನೇಕ ಪದಾಧಿಕಾರಿಗಳನ್ನ ಬದಲಾವಣೆ ಮಾಡಲಾಗಿದ್ದು, ಹೊಸದಾಗಿ ನೇಮಕ ಮಾಡಿಕೊಂಡ ಬಹುತೇಕ ಪದಾಧಿಕಾರಿಗಳು ಕಾಂಗ್ರೆಸ್ನ ಸದಸ್ಯತ್ವವನ್ನೆ ಹೊಂದಿಲ್ಲ. ಅಂತಹವರಿಗೆ ಸ್ಥಾನ ನೀಡುವ ಮೂಲಕ ಕಳೆದ ಹತ್ತಾರು ದಶಕದಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದವರನ್ನ ಕೈ ಬಿಡುವ ಮೂಲಕ ಇಲ್ಲಿ ಪಕ್ಷ ನೆಲಕಚ್ಚುವಂತೆ ಮಾಡಲಾಗಿದೆ.
ಇದನ್ನು ಓದಿ
- ಕಾಂಗ್ರೇಸ್ನ ಹಿರಿಯ ಶಾಸಕ ಶಾಮನೂರು ವಿಧಿವಶ
- ಶಿರಸಿ ಪಂಡಿತ್ ಆಸ್ಪತ್ರೆಗಾಗಿ ಸುವರ್ಣ ಸೌಧದ ಎದುರು ಹೋರಾಟ : ಅನಂತಮೂರ್ತಿ ಹೆಗಡೆ
- ಇಂದಿನ ರಾಶಿಫಲ- ನಿತ್ಯದ ಪಂಚಾಂಗ
ಇದಕ್ಕೆಲ್ಲಾ ಪ್ರಮುಖವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವ ಮೂಲಕ ಠೇವಣಿ ಕಳೆದುಕೊಂಡ ಅಭ್ಯರ್ಥಿ ಹಾಗೂ ಆತನ ಟೀಂ ಕಾರಣ ಎನ್ನುವ ಮಾತು ಪಕ್ಷದಲ್ಲಿಯೇ ಕೇಳಿ ಬರತ್ತಾ ಇದೆ. ಈತ ಠೇವಣಿ ಕಳೆದುಕೊಳ್ಳುವುದು ಪಕ್ಕಾ ಅಂತಾ ಗೊತ್ತಿದ್ದರು ಸಹ ಕಳೆದ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ಹೈಕಮಾಂಡಗಿಂತಲ್ಲೂ ಮೇಲೆ ಹೋಗಿ ಟಿಕೆಟ್ ಗಿಟ್ಟಿಸಿಕೊಂಡು ಬಂದು ಸೋತ್ತು ಹೋದರು ಪಕ್ಷ ಸಂಘಟನೆ ಮಾಡುವ ಬದಲು ಪಕ್ಷ ಒಡೆಯುವ ಕೆಲಸ ಇನ್ನೂ ಬಿಟ್ಟಿಲ್ಲ ಎನ್ನಲಾಗಿದೆ.
ಲೋಕಸಭಾ ಚುನಾವಣಾ ಪೂರ್ವದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಘಟಕವನ್ನ ಕೂಡ ಬದಲಾವಣೆ ಮಾಡುವ ಮೂಲಕ ಪಕ್ಷದೊಳಗೆ ಬಿರುಕು ಉಂಟಾಗುವಂತೆ ಮಾಡಲಾಗಿತ್ತು. ಆದರೆ ಅದು ಹಾಗೋ ಹೀಗೋ ಮಾಡಿ ಚುನಾವಣೆ ಸಮಯ ಎದುರಾಗಿರುವ ಕಾರಣ ಸರಿಪಡಿಸಿಕೊಂಡು ಹೋಗಲಾಗಿತ್ತು. ಲೋಕಸಭಾ ಚುನಾವಣಾ ನಂತರದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಬದಲಾವಣೆ ಆಗಿದ್ದು ಪಕ್ಷದಲ್ಲಿ ಈಗ ಇನ್ನಷ್ಟು ಭಿನ್ನ ಮತಕ್ಕೆ ಕಾರಣವಾಗಿದೆ. ಪಕ್ಷದ ಹೈಕಮಾಂಡ ಠೇವಣಿ ಕಳೆದುಕೊಂಡ ಟೀಂ ಮುಂದೆ ಇಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾದರೆ ಮುಂದಿನ ದಿನದಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಚಿಹ್ನೆ ಹುಡುಕಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ







