suddibindu.in
Karwar:ಕಾರವಾರ: ಉತ್ತರಕನ್ನಡ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯಲ್ಲಿ ದಿನ ಕಳೆದಂತೆ ಬಹುಸಂಖ್ಯಾತ ಸಮಾಜವನ್ನ ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಈಗಾಗಲೇ ಜಿಲ್ಲಾಧ್ಯಕ್ಷರಿಂದ ಹಿಡಿದು ಬ್ಲಾಕ್ ಅಧ್ಯಕ್ಷ ಹುದ್ದೆ ಇದುವರೆಗೆ ಜಿಲ್ಲೆಯ ಬಹುಸಂಖ್ಯಾತರ ಹಿಡಿತದಲ್ಲಿತ್ತು. ಆದರೆ ಇತ್ತೀಚಿನ ದಿನದಲ್ಲಿ ನಿಧಾನವಾಗಿ ಅದು ಬಹುಸಂಖ್ಯಾತ ಸಮಾಜದ ಹಿಡಿತ ತಪ್ಪುಲು ಆರಂಭವಾಗಿದೆ.ತಮ್ಮ ಅನುಕುಲಕ್ಕೆ ತಕ್ಕ ಹಾಗೆ ಬದಲಾವಣೆ ಮಾಡುವ ಮೂಲಕ ಪಕ್ಷದ ಅಸ್ತಿತ್ವಕ್ಕೆ ದಕ್ಕೆ ಉಂಟು ಮಾಡಲಾಗುತ್ತಿದೆ.

ಈಗಾಗಲೇ ಲೋಕಸಭಾ ಚುನಾವಣಾ ಪೂರ್ವದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನ ಮೇಲ್ ವರ್ಗದವರಿಗೆ ನೀಡಲಾಗಿದೆ.ಮೇಲ್ವರ್ಗದ ಮತಗಳು ಕಾಂಗ್ರೆಸ್ ಪರವಾಗಿ ಬಾರದೆ ಇದ್ದರೂ ಕೂಡ ಆ ವರ್ಗಕ್ಕೆ ಸೇರಿದವರಿಗೆ ಅಧ್ಯಕ್ಷ ಪಟ್ಟಕ್ಕೆ ಏರಿಸಲಾಗಿದೆ‌.ಇನ್ನೂ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ನಲ್ಲಿ ಕೂಡ ಇದೀಗ ಅಧ್ಯಕ್ಷರ ಬದಲಾವಣೆ ಮಾಡಿರುವುದು ಪಕ್ಷಕ್ಕಾಗಿ ಅನೇಕ ವರ್ಷಗಳಿಂದ ದುಡಿದ ಬಹುಸಂಖ್ಯಾತ ಸಮಾಜದ ಮುಖಂಡರು ಸಿಡಿಮಿಡಿಗೊಳ್ಳುವಂತಾಗಿದೆ.

ಹೊನ್ನಾವರ ಹಾಗೂ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗಿ ನಾಮಧಾರಿಗಳು,ಹಾಲಕ್ಕಿ,ಮೀನುಗಾರ, ಪಟಗಾರ,ಸಮಾಜದ ಮತದಾರರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಅಷ್ಟೆ ಅಲ್ಲದೆ ಈ ಸಮಾಜದ ಬಹುತೇಕರು ಕಾಂಗ್ರೆಸ್ ಪರವಾಗಿದ್ದಾರೆ. ಹೀಗಿರುವಾಗ ಈ ಎಲ್ಲಾ ಸಮಾಜವನ್ನ ಕಡೆಗಣಿಸಲಾಗಿದೆ ಎನ್ನುವ ಚರ್ಚೆಗಳು ಪಕ್ಷಗೊಳಗೆ ಕೇಳಿ ಬರುತ್ತಿದೆ.ಇದಕ್ಕೆಲ್ಲಾ ಪ್ರಮುಖವಾಗಿ ಕಳೆದ ಬಾರಿ ಕುಮಟಾ ವಿಧಾಸಭಾ ಕ್ಷೇತ್ರದಲ್ಲ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಠೇವಣಿ ಕಳೆದುಕೊಂಡವರ ಕೈವಾಡ ಇದೆ ಎಂದು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.

ಪಕ್ಷದ ಹೈಕಮಾಂಡ ಅಧ್ಯಕ್ಷರ ಬದಲಾವಣೆ ಮಾಡುವ ಸಂದರ್ಭದಲ್ಲಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯವನ್ನ ಪಡೆಯದೆ ಈ ರೀತಿ ಪಕ್ಷಕ್ಕೆ ಲಾಭವಿಲ್ಲದವರ ಮಾತಿಗೆ ಮಣೆ ಹಾಕುವುದು ಸರಿಯಲ್ಲ.ಈ ರೀತಿ ಆದರೆ ಮುಂದಿನ ದಿನದಲ್ಲಿ ನಾವೇಲ್ಲಾ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಿದ್ದಾರೆ‌.ಜಿಲ್ಲೆಯಲ್ಲಿನ ನಾಯಕರು ಇಂತಹ ಬೆಳವಣಿಗೆಗೆ ಅವಕಾಶ ನೀಡಬಾರದು ಎನ್ನುವುದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ.