suddibindu.in
Ankolaಅಂಕೋಲಾ:ಹುಬ್ಬಳ್ಳಿ ರಾಷ್ಡೀಯ ಹೆದ್ದಾರಿ 63ರಲ್ಲಿ ತಾಲೂಕಿನ ಸರಳೆಬೈಲ ಬಳಿ ಮಂಗಳವಾರ ಸಂಜೆ ಲಾರಿ ಹಾಯ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
- ಮೀನುಗಾರ ಯುವಕನ ನಿಧನಕ್ಕೆ ರೂಪಾಲಿ ನಾಯ್ಕ ಸಂತಾಪ, ಹೆಚ್ಚಿ ಪರಿಹಾರಕ್ಕೆ ಆಗ್ರಹ
- RSS/ಆರ್ಎಸ್ಎಸ್ ಪ್ರಾಯೋಜಿತ ದುಷ್ಕರ್ಮಿಗಳ ಬೆದರಿಕೆ ಪದಗಳನ್ನ ಖಂಡಿಸುತ್ತೇವೆ:ನಿವೇದಿತ್ ಆಳ್ವಾ
- ಎಷ್ಟೇ ಅಪಪ್ರಚಾರ ಮಾಡಿದರೂ ಸ್ಫರ್ಧೆಯಿಂದ ಹಿಂದೆ ಸರಿಯುವುದಿಲ್ಲ: ಸರಸ್ವತಿ ಎನ್. ರವಿ
ಮಕ್ಕಿಗದ್ದೆ ಗ್ರಾಮದ ಕೀರಾ ಕೃಷ್ಣ ಹರಿಕಂತ್ರ (60) ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ.ಈತ ಕುಮಟಾ ತಾಲೂಕಿನ ಬರ್ಗಿಯಲ್ಲಿ ಮಂಗಳವಾರ ನಡೆದ ಗಡಿ ಹಬ್ಬಕ್ಕೆ ಹೋಗಿದ್ದು, ಹಬ್ಬ ಮುಗಿಸಿಕೊಂಡು ವಾಪಸ್ ಮನೆಗೆ ತೆರಳುತ್ತಿರುವ ವೇಳೆ ಈ ದುರಂತ ಘಟನೆ ನಡೆದಿದೆ.
ಹುಬ್ಬಳ್ಳಿಯ ಮತೀನ್ ಟ್ರಾನ್ಸ್ಪೋರ್ಟ್ ಕಂಪನಿಗೆ ಸೇರಿದ್ದು ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಬರುವಾಗ ಲಾರಿ ಚಾಲಕ ಮದ್ಯ ಸೇವನೆ ಮಾಡಿ ಹೆದ್ದಾರಿಯಲ್ಲಿ ಲಾರಿಯನ್ನ ಬೇಕಾಬಿಟ್ಟಿಯಾಗಿ ಚಲಿಸುತ್ತಿದ್ದ ಎನ್ನಲಾಗಿದೆ. ಬೈಕ ಸವಾರ ತನ್ನ ದಿಕ್ಕಿನಲ್ಲಿ ಚಲಿಸುತ್ತಿದ್ದರು ಲಾರಿ ಚಾಲಕ ವಿರುದ್ಧ ದಿಕ್ಕಿಗೆ ಬಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಕೀರಾ ಹರಿಕಂತ್ರ ಅವರು ಕೃಷಿಯಲ್ಲಿಯೂ ಸಹ ಸಾಕಷ್ಟು ಸಾಧನೆ ಮಾಡುವ ಮೂಲಕ ಅನೇಕ ಪ್ರಶಸ್ತಿ ಕೂಡ ಪಡೆದಿದ್ದರು.ಇತ್ತೀಚೆಗೆ ಸೂಪರ್ ಸ್ಟಾರ್ ರೈತ ಪ್ರಶಸ್ತಿಯನ್ನೂ ಪಡೆದಿದ್ದರು. ಕಾಡಿನೊಳಗಿನ ಮಕ್ಕಿಗದ್ದೆ ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಪಡೆಯಲು ಸಾಕಷ್ಟು ಹೋರಾಟ ಮಾಡಿದ್ದರು.