suddibindu.in
ವಿಜಯಪುರ : ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ ತಡೆದು ಹಣ ದರೋಡೆ ಮಾಡಿದ ಐವರು ಆರೋಪಿಗಳನ್ನ ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
.
- ಕಾಸರಗೋಡು ಬಳಿ ಪ್ಲೈವುಡ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಓರ್ವ ಕಾರ್ಮಿಕ ಸಾವು, ಹಲವರಿಗೆ ಗಾಯ
- ಕರ್ನಾಟಕದಲ್ಲಿ ಬಿಜೆಪಿ ಹೊಸ ರಾಜಕೀಯ ಸಮೀಕರಣ: ಕುಮಾರಸ್ವಾಮಿ ಸುಪ್ರಿಂ
- ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ — ಹೆದ್ದಾರಿ ತಡೆದು ಆಕ್ರೋಶ
ದರೋಡೆ ಪ್ರಕರಣದಲ್ಲಿ ಸುನೀಲ ವಡ್ಡರ (21), ಶಿವಾನಂದ ದಳವಾಯಿ 21) ಮಹಾಂತೇಶ ತಳವಾರ (35), ಧರೇಶ ದಳವಾಯಿ (21), ಶಿವಪ್ಪ ಮಾಶ್ಯಾಳ (39), ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಚಂದ್ರಕಾಂತ ಕುಂಬಾರ ಅವರಿಗೆ ಸಂಬಂಧಿಸಿದ ಹತ್ತಿಯನ್ನು ಧಾರವಾಡ ಜಿಲ್ಲೆಯ ಅಮೀನ ಬಾವಿಯಲ್ಲಿರುವ ಅನೀಲಕುಮಾರ & ಕಂಪನಿಗೆ ಮಾರಾಟ ಮಾಡಿದ 32,29,364 ಹಣವನ್ನು ತೆಗೆದುಕೊಂಡು ಊರಿಗೆ ತೆರಳುವ ಸಂದರ್ಭದಲ್ಲಿ ಕೋಲ್ಹಾರ ಹೊರಭಾಗದಲ್ಲಿ ವಾಹನ್ ಅಡ್ಡಗಟ್ಟಿ ದರೋಡೆ ಮಾಡಿದ್ದರು.
ಇನ್ನೂ ಕೃತ್ಯದಲ್ಲಿ ಶಾಮೀಲಿದ್ದ ಕ್ಯಾಂಟರ್ ಚಾಲಕ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿತರಿಂದ ಕೃತ್ಯಕ್ಕೆ ಬಳಸಿದ ವಾಹನ, ಬಡಿಗೆ, ರಾಡ್ ಹಾಗೂ ಸುಲಿಗೆಯಾದ ಹಣದ ಪೈಕಿ 31,04,364 ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಇಂಧನಕ್ಕೆ ಒಪ್ಪಿಸಲಾಗಿದೆ..







