suddibindu.in
ಕಾರವಾರ : ರಾಜ್ಯದಲ್ಲಿ ಸದ್ದು ಮಾಡಿರುವ ಪ್ರಜ್ಚಲ್ ರೇವಣ್ಣ,ಅಶ್ಲೀಲ್ ವಿಡಿಯೋ ಪ್ರಕರಣ ರಾಜಕಾರಣದಲ್ಲಿ ವ್ಯಾಪಕ ಚರ್ಚೆ ಆಗತ್ತಿದೆ. ಈ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ದೇಶದಲ್ಲಿ ಉಜ್ವಲ ಯೋಜನೆ ಬದಲಿಗೆ ಪ್ರಜ್ವಲ ಯೋಜನೆ ಬಂದಿದೆ ಎಂದು ಟೀಕಿಸಿದ್ದಾರೆ.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಕಾರವಾರದ ಪ್ರಚಾರದ ವೇಳೆ ಮಾತನಾಡಿದ ಅವರು ದೇಶದಲ್ಲಿ ಉಜ್ವಲ್ ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್ ನೀಡಿ ಸಬ್ಸಿಡಿ ಹಾಕುವುದಾಗಿ ಹೇಳಿದ್ದರು, ಯೋಜನೆ ಆರಂಭವಾದ ಮೂರ ನಾಲ್ಲು ತಿಂಗಳು ಮಾತ್ರ ಸಬ್ಸಿಡಿ ಕೊಟ್ಟು ನಂತರ ಕೈ ಬಿಡಲಾಗಿದೆ. ಬಿಜೆಪಿ ಅಂದು ಕೊಂಡದಂತೆ ನಡೆದುಕೊಂಡಿಲ್ಲ, ಉಜ್ವಲ್ ಹೋಗಿ ಪ್ರಜ್ವಲ ಯೋಜನೆ ಆಗಿದೆ.
ಇದನ್ನೂ ಓದಿ
- ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಆಚರಣೆ
- Prajwal Revanna/ಗ್ರಂಥ ಪಾಲಕನಾಗಿ ಪ್ರಜ್ವಲ್ ರೇವಣ್ಣ ನೇಮಕ
- ಅತ್ಯುತ್ತಮ ಚಾಲಕ ಪ್ರಶಸ್ತಿ ಪುರಸ್ಕೃತ ದೇವರಹಕ್ಕಲದ ಈಶ್ವರ ನಾಯ್ಕ ಇನ್ನಿಲ್ಲ
ಇನ್ನೂ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಮಹಿಳೆಯರಿಗೆ ಉಜ್ವಲ ಯೋಜನೆ ಗ್ಯಾಸ್ ಬದಲಾಗಿದೆ ಪ್ರಜ್ವಲ ಯೋಜನೆ ಸಿಕ್ಕಿದೆ ಎಂದು ಪರೋಕ್ಷವಾಗಿ ಪ್ರಜ್ವಲ ರೇವಣ್ಣನ ಅಶ್ಲೀಲ ವಿಡಿಯೋ ವೈರಲ್ ಆಗಿರುವ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.