suddibindu.in
Karwar:ಕಾರವಾರ : ಸಮುದ್ರದಲ್ಲಿ ಕಪ್ಪಚಿಪ್ಪು (ಚಿಪ್ಪಿಕಲ್ಲು) ತೆಗೆಯಲು ಹೋಗಿದ್ದ ತಾಯಿ ಮಗಳು ಇಬ್ಬರೂ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೈತಖೋಲ್ ಬ್ರೇಕ್‌ವಾಟರ್ ಬಳಿ ನಡೆದಿದೆ.
ಘಟನೆಯಲ್ಲಿ ರೇಣುಕಾ ಗೌಡ (ತಾಯಿ), ಹಾಗೂ ಸುಜಾತ ಗೌಡ(ಮಗಳು), ಎಂಬುವವರೆ ಮೃತ ಪಟ್ಟಿರುವ ತಾಯಿ,ಮಗಳಾಗಿದ್ದಾರೆ. ಇಬ್ಬರೂ ಬೆಳಿಗ್ಗೆ ಕಪ್ಪೆಚಿಪ್ಲು(ಚಿಪ್ಪಿಕಲ್ಲು) ತೆಗೆಯಲು ಹೋಗಿದ್ದರು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದಲ್ಲಿ ಮುಳುಗಡೆಯಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ
- ಚಿತ್ತಾಕೂಲಕ್ಕೆ ನೂತನ ಪಿಎಸ್ಐ ಆಗಿ ಪರಶುರಾಮ್ ಮಿರ್ಜಿಗಿ, ಮುಂಡಗೋಡಕ್ಕೆ ಮಾಹಾಂತೇಶ್ ವಾಲ್ಮೀಕಿ ನೇಮಕ
- ದಸರಾ ಉದ್ಘಾಟನೆ ವಿವಾದಕ್ಕೆ ಫುಲ್ಸ್ಟಾಪ್ : ಬಾನು ಮುಷ್ತಾಕ್ ಆಯ್ಕೆಗೆ ಹೈಕೋರ್ಟ್ ಹಸಿರು ನಿಶಾನೆ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
ಈಗಾಗಲೇ ಇಬ್ಬರ ಮೃತ ದೇಹವನ್ನ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ದಡಕ್ಕೆ ತಂದಿದ್ದಾರೆ. ಘಟನೆಯ ಸುದ್ದಿ ತಿಳಿದ ಕಾರವಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ.