suddibindu.in
Bangalore: ಬೆಂಗಳೂರು: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ (Congress candidate) ಡಾ.ಅಂಜಲಿ ನಿಂಬಾಳ್ಕರ್ (Dr Anjali Nimbalkar) ಅವರು ಕೆಪಿಸಿಸಿ ಕಚೇರಿಯಲ್ಲಿ ಚುನಾವಣಾ ಸ್ಪರ್ಧೆಗೆ ಪಕ್ಷದ ಬಿ ಫಾರಂ ಪಡೆದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ (Karnataka Pradesh Congress) ಸಮಿತಿಯ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar)ಅವರು ಕಚೇರಿಯಲ್ಲಿ ಡಾ.ಅಂಜಲಿ ಅವರಿಗೆ ಬಿ ಫಾರಂ ಹಸ್ತಾಂತರಿಸಿ, ಚುನಾವಣೆಯಲ್ಲಿ ವಿಜಯಶಾಲಿಯಾಗಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ
- PSI/ಪಿಎಸ್ಐ ಪತ್ನಿ ಆತ್ಮಹತ್ಯೆ
- ಯಲ್ಲಾಪುರ ಬಳಿ ಭೀಕರ ರಸ್ತೆ ದುರಂತ: ಬಸ್–ಲಾರಿ ಡಿಕ್ಕಿ, ಮೂವರು ಸಾವು – ಏಳು ಮಂದಿ ಗಂಭೀರ”
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕಿತ್ತೂರು ಶಾಸಕರ (Kittur MLA) ಬಾಬಾಸಾಹೇಬ ಪಾಟೀಲ್ ಮತ್ತು ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ್ ಉಪಸ್ಥಿತರಿದ್ದರು.

ಏ 16ಕ್ಕೆ ನಾಮಪತ್ರ ಸಲ್ಲಿಕೆ
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ ಅವರು ಏ.16ರಂದು ಬೆಳಿಗ್ಗೆ 10ಕ್ಕೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.