suddibindu.in
Karwar: ಕಾರವಾರ : ಹಿಂದೂತ್ವದ ರಕ್ಷಣೆಗಾಗಿ ತಮ್ಮ ಜೀವವನ್ನೆ ಪಣಕ್ಕಿಟ್ಟು ಹೋರಾಟ ನಡೆಸುವ ಮೂಲಕ ಮೂರು ದಶಕದಿಂದ ಸಂಸದರಾಗಿ ಆಯ್ಕೆಯಾಗಿದ್ದ ಫೈಯರ್ ಬ್ರಾಂಡ್ ಅನಂತಕುಮಾರ ಹೆಗಡೆ (Anantakumar Hegde) ಅವರಿಗೆ ಈ ಭಾರಿ ಪಕ್ಷ ಟಿಕೆಟ್ ನೀಡದೆ ‘ಕೈಕೊಟ್ಟರೆ.’ ಇತ್ತ ಹೊಸ ಅಭ್ಯರ್ಥಿ ಪರ ಪ್ರಚಾರಕ್ಕೆ ಬಾರದೆ ಎಂಪಿ ಕೈ ಕೊಟ್ಟು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ.
ಉತ್ತರಕನ್ನಡ ಲೋಕಸಭಾ(LokSabha 2024) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಆಗುವ ಮೊದಲು ಎಂಟನೆ ಭಾರಿಯೂ ತಾನೇ ಅಭ್ಯರ್ಥಿ ಆಗಬಹುದು ಎನ್ನುವ ಭಲವಾದ ವಿಶ್ವಾಸದಿಂದ ಕ್ಷೇತ್ರದ ತುಂಬಾ ಓಡಾಟ ನಡೆಸಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ ಸಂಸದ ಅನಂತಕುಮಾರ ಹೆಗಡೆಗೆ ಇದೀಗ ಬಿಜೆಪಿ ಟಿಕೆಟ್ ಕೈ ತಪ್ಪಿದೆ.ಇದು ಜಿಲ್ಲೆಯ ಅವರ ಅಭಿಮಾನಿಗಳ ಅಸಮಧಾನಕ್ಕೆ ಕಾರಣವಾಗಿದೆ. ಅನಂತಕುಮಾರ ಹೆಗಡೆ ಎಂದು ರಾಜಕೀಯಕ್ಕಾಗಿ ಹಿಂದೂತ್ವದ ಮಾಡಿಕೊಂಡು ಬಂದವರಲ್ಲ. ಅವರ ಹಿಂದೂತ್ವ ಎಂದೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿಲ್ಲ.ಇದು ಕರ್ನಾಟಕದ ಜನರಿಗೆ ಗೊತ್ತಿರುವ ಸತ್ಯ.
ಇದನ್ನೂ ಓದಿ
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
- ಕೋನಳ್ಳಿ ಚಾತುರ್ಮಾಸ್ಯದ ಶ್ರೀಗಳ ಕುಟೀರ ಲೋಕಾರ್ಪಣೆ
- ಮುದಗಾ ಬಳಿ ಕಾರು-ಟಾಟಾ ಏಸ್ ಅಪಘಾತ: ಓರ್ವನಿಗೆ ಗಾಯ
ಆದರೆ ದಶಕಗಳ ಕಾಲ ಹಿಂದೂತ್ವದ ರಕ್ಷಣೆಗಾಗಿ ಹೋರಾಟ ಮಾಡಿಕೊಂಡು ಬಂದು ಆರು ಬಾರಿ ಸಂಸದರಾಗಿದ್ದ ಹೆಗಡೆ ಈ ಭಾರೀ ಟಿಕೆಟ್ ತಪ್ಪಿಸಲಾಗಿದೆ. ಇದು ಈ ಕ್ಷೇತ್ರದ ಬಿಜೆಪಿಯ ಮೇಲೆ ಯಾವ ಪರಿಣಾಮ ಉಂಟಾಗಲಿದೆ ಎನ್ನುವುದು ಈಗಲೇ ಹೇಳೋದಕ್ಕೆ ಸಾಧ್ಯವಾಗಲ್ಲ.ಟಿಕೆಟ್ ಘೋಷಣೆಯಾಗುವ ಕೊನೆ ಕ್ಷಣದವರೆಗೂ ಕ್ಷೇತ್ರದಕ್ಕಿ ಗಟ್ಟಿಯಾಗಿ ನಿಂತಿದ್ದ ಸಂಸದ ಅನಂತಕುಮಾರ ಹೆಗಡೆ ಇದೀಗ ಕಾಗೇರಿ ಅವರಿಗೆ ಟಿಕೆಟ್ ಘೋಷಣೆಯಾದ ಕ್ಷಣದಿಂದ ದೂರ ಉಳಿದುಕೊಂಡಿದ್ದಾರೆ.
ಅನಂತಕುಮಾರ ಅವರು ಪ್ರಚಾರದಲ್ಲಿ ಕಾಣಿಸಿಕೊಳ್ಳದೆ ಇರುವ ಬಗ್ಗೆ ಮಾಧ್ಯಮದವರು ಹೊಸ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರಲ್ಲಿ ಮಾಧ್ಯಮದವರು ಪ್ರಶ್ನೆ ಮಾಡತ್ತಾ ಇದ್ದರೆ, ಅವರು ಬರತ್ತಾರೆ, ನಮ್ಮಲ್ಲಿ ಹೊಂದಾಣಿಕೆ ಹೊರತೆ ಇರಬಹುದು, ಆದರು ಅದಕ್ಕೆ ತಲೆ ಕೆಡೆಸಿಕೊಳ್ಳಲ್ಲ ನನ್ನ ಗೆಲುವಿಗಾಗಿ ಖಂಡಿತವಗಿಯೂ ಬರಲಿದ್ದಾರೆ ಎನ್ನುವ ವಿಶ್ವಾಸ ಇದೆ. ಅಂತಾನೇ ದಿನ ಕಳೆಯುತ್ತಿದ್ದಾರೆ.
ಆದರೆ ಅನಂತಕುಮಾರ ಹೆಗಡೆ ಅವರು ಸದ್ಯ ಯಾರಿಗೂ ಸಿಗಲೇ ಬಾರದು ಎಂದು ಕ್ಷೇತ್ರದಿಂದ ದೂರ ಇದ್ದಾರೆ ಎನ್ನುವ ಬಗ್ಗೆ ಅವರ ಆಪ್ತರೆ ಹೇಳಿಕೊಳ್ಳತ್ತಾ ಇದ್ದು, ನಮ್ಮ ಸಾಹೇಬ್ರು ಚುನಾವಣೆ ಮುಗಿಯೋ ತನಕ ಈಕಡೆ ಬರಲ್ಲ, ಹಿಂದೂತ್ವಕ್ಕಾಗಿ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟು ಹೋರಾಟ ನಡೆದಿರುವ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸಿ ಬಿಜೆಪಿ ದೊಡ್ಟ ತಪ್ಪು ಮಾಡಿದೆ. ಹೀಗಾಗಿ ಅವರು ಸೇರಿದಂತೆ ನಮ್ಮಗೆಲ್ಲಾ ತುಂಬಾ ಬೇಸರವಾಗಿದೆ. ಹೀಗಾಗಿ ಅವರು ಪ್ರಚಾರಕ್ಕೆ ಬರೋದೆ ಡೌಟ್ ಎಂದಹ ಅವರ ಆಪ್ತ ವಲಯದಲ್ಲ ಇದೀಗ ಗಂಭೀರವಾದ ಚರ್ಚೆ ನಡೆಯುತ್ತಿದೆ