suddibindu.in
Sirsi:ಶಿರಸಿ : ಕಳೆದ ಆರು ಭಾರಿ ಸಂಸದರಾದ ಫೈಯರ್ ಬ್ರಾಂಡ್ ಅನಂತಕುಮಾರ ಹೆಗಡೆ (Fier brand Anantakumar Hegade) ಅವರಿಗೆ ಬಿಜೆಪಿ ಹೈಕಮಾಂಡ ಈ ಬಾರಿ ಟಿಕೆಟ್ ತಪ್ಪಿಸಿ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮಣೆ ಹಾಕಿದೆ.ಇದರಿಂದಾಗಿ ಅನಂತಕುಮಾರ ಹಾಗೂ ಅವರ ಬೆಂಬಲಿಗರು ಕೆಂಡಾಮಂಡಲರಾಗಿದ್ದಾರೆ, ಅನಂತಕುಮಾರ ಅವರ ಆಪ್ತ ಕೃಷ್ಣ ಎಸಳೆ ಅವರನ್ನ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಸಲಿದ್ದಾರೆನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅನಂತಕುಮಾರ ಹೆಗಡೆ ಸತತ ಆರು ಭಾರಿ ಈ ಕ್ಷೇತ್ರದಿಂದ ಆಯ್ಕೆ ಆಗುವ ಮೂಲಕ ಉತ್ತರಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿತ್ತು.ಆದರೆ ಈ ಬಾರಿ ಅದ್ಯಾಕೋ ಏನೋ ಬಿಜೆಪಿ ಹೈಕಮಾಂಡ ಹಾಲಿ ಸಂಸದರನ್ನ ಕೈ ಬಿಟ್ಟು, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಅವರಿಗೆ ಲೋಕಸಭಾ ಟಿಕೆಟ್ ನೀಡಿದೆ. ಟಿಕೆಟ್ ಘೋಷಣೆ ಆದ ನಂತರದಲ್ಲಿ ಕಾಗೇರಿ ಅವರು ಅನಂತಕುಮಾರ ಹೆಗಡೆ ಅವರ ಬೆಂಬಲ ಕೇಳಲು ಅವರ ಮನೆ ಗೇಟಿಗೆ ಹೋಗಿದ್ದರು ಎನ್ನಲಾಗಿದೆ.ಆದರೆ ಅನಂತಕುಮಾರ ಕಾಗೇರಿಯವರನ್ನ ಒಳಗಡೆ ಸೇರಿಸಿಕೊಂಡಿಲ್ಲ ಎನ್ನುವ ವಿಚಾರ ಕೂಡ ಇದೀಗ ಚರ್ಚೆಯಾಗುತ್ತಿದೆ.
ಇದನ್ನೂ ಓದಿ
- ಮಾಜಿ ಸಚಿವ ಮನೋಹರ ತಹಸೀಲ್ದಾರ ವಿಧಿವಶ
- ಹೋಂ ಸ್ಟೇ,ರೆಸಾರ್ಟ್ಗಳಿಗೆ ಎಚ್ಚರಿಕೆ ನೀಡಿದ ಪ್ರವಾಸೋದ್ಯಮ ಇಲಾಖೆ
- ಲಕ್ಕಿ ಡ್ರಾ ಹೆಸರಲ್ಲಿ ಸಾವಿರಾರು ಜನರಿಗೆ ಪಂಗನಾಮ..! ನೀವೇನಾದ್ರೂ ಹಣ ಕಟ್ಟಿದ್ದರೆ ಗೋವಿಂದ.ಗೋವಿಂದ….
ಅನಂತಕುಮಾರ ತಮ್ಮಗೆ ಟಿಕೆಟ್ ಕೈ ತಪ್ಪಿದ ಬಳಿಕ ಭಾರೀ ರಣತಂತ್ರವನ್ನ ಹೆಣೆಯುತ್ತಿದ್ದಾರೆನ್ನಲಾಗಿದೆ.ಈ ನಡುವೆ ಜೆಡಿಎಸ್‌ನಲ್ಲಿರುವ ಸೂರಜ್ ಸೋನಿ ಅವರನ್ನ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಹ ಅನಂತಕುಮಾರ ಹೆಗಡೆ ಮುಂದಾಗಿದ್ದರು ಎನ್ನಲಾಗಿದೆ.ಆದರೆ ಇದಕ್ಕೆ ಸೂರಜ ನಾಯ್ಕ ಸೋನಿ ಅವರು ಒಪ್ಪಿಗೆ ನೀಡದೆ ಸುಮ್ಮನಾಗಿದ್ದರು.ನಂತರದಲ್ಲಿ ಸೂರಜ್ ಸೋನಿ ಅಭಿಮಾನಿಗಳು ಸಹ ಸಾಮಾಜಿ ಜಾಲತಾಣದಲ್ಲಿ ಸೂರಜ್ ನಾಯ್ಕ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆಂದು ದೊಡ್ಡ ಮಟ್ಟದಲ್ಲಿ ವೈರಲ್ ಮಾಡಿದರು.
ಇದನ್ನ ಗಮನಿಸಿದ ಸೋನಿ ತಾವು ಪಕ್ಷೇತರವಾಗಿ ಸರ್ಧೆ ಮಾಡುವುದಿಲ್ಲವೆಂದು ತಮ್ಮ ಫೇಸ್‌ಬುಕ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ನಂತರದಲ್ಲಿ ಇದೀಗ ಅನಂತಕುಮಾರ ಅವರ ಆಪ್ತರಾಗಿರುವ ಕೃಷ್ಣ ಎಸಳೆ ಅವರನ್ನ ಕಾಗೇರಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಂದಾಗಿರುವ ಬಗ್ಗೆ ಅನಂತಕುಮಾರ ಹೆಗಡೆ ಅಭಿಮಾನಿಗಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದನ್ನ ಕಾದು ನೋಡಬೇಕಿದೆ.
.