ಶಿರಸಿ ಜಾತ್ರೆ ಪೇಟೆಯಲ್ಲಿ ಸುತ್ತಾಡಿದ “ಕೈ” ಅಭ್ಯರ್ಥಿ ಅಂಜಲಿ ನಿಂಬಾಳ್ಕರ್.
SIRSI:ಶಿರಸಿ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ನಿನ್ನೆ ಶಿರಸಿಗೆ ಆಗಮಿಸಿದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ (Anjali Nimbalkar,)ಅವರು ಇಂದು ಸಾಮಾನ್ಯ ಮಹಿಳೆಯಂತೆ ಶಿರಸಿ ಜಾತ್ರೆಯಲ್ಲಿ ರೌಂಡ್ಸ್ ಹಾಕಿದ್ದರು.
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಬೆಳ್ಳಿಗ್ಗೆ ತಾಯಿ ಮಾರಿಕಾಂಬಾ(Maricamba)ದೇವಿಯ ದರ್ಶನ ಪಡೆದು ಉಂಡಿ ತುಂಬಿ ದೇವಿಯ ಆಶಿರ್ವಾದ ಪಡೆದರು. ಬಳಿಕ ಕೆಲ ಸಮಯದ ಜಾತ್ರೆ ಪೇಟೆಯಲ್ಲಿ ರೌಂಡ್ಸ್ ಹಾಕಿದ ನಿಂಬಾಳ್ಕರ್ ಅವರು ತಮ್ಮಗೆ ಇಷ್ಟವಾದ ಕೆಲ ವಸ್ತುಗಳನ್ನ ಖರೀದಿ ಕೂಡ ಮಾಡಿದರು. ಇನ್ನೂ ವ್ಯಾಪಾರಸ್ಥ ಮಹಿಳೆಯರೊಂದಿಗೆ ಕುಶಲೋಪರಿ ವಿಚಾರಿಸಿದರು.
ಅಂಜಲಿ ನಿಂಬಾಳ್ಕರ್ ಅವರು ಜಾತ್ರೆ ಪೇಟೆ ಮುಗಿಸಿ ಕಾರನಲ್ಲಿ ಹೋಗತ್ತಿರುವಾಗ ಅವರನ್ನ ಗಮನಿಸಿದ ರುದ್ರಾಕ್ಷಿ ಮಾಲೆಗಳ ವ್ಯಾಪಾರಕ್ಕೆ ಬಂದ ಮಹಿಳೆಯರು ಕರೆದ್ದರು. ತಕ್ಷಣ ಕಾರ ಇಳಿದು ಬಂದ ಅಂಜಲಿ ನಿಂಬಾಳ್ಕರ್ ಆ ಮಹಿಳೆಯರ ಕಷ್ಟಗಳನ್ನ ವಿಚಾರಿಸಿದರು. ನಂತರ ಮಹಿಳೆಯರೊಂದಿಗೆ ಫೋಟೋ ತೆಗೆಸಿಕೊಂಡು ಸರಳತೆ ಮೆರೆದರು.