suddibindu.in
ಕಾರವಾರ:ಕಾಂಗ್ರೇಸ್ ಪಕ್ಷದ ಅಧೀಕೃತ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಅಂಜಲಿ ನಿಂಬಾಳಕರ ಅವರನ್ನ ಘೋಷಣೆ ಮಾಡುತ್ತಾರೆ ಎಂಬ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಾಂಗ್ರೇಸ್ ಪಕ್ಷದ ಹಾಗೂ ಸಾರ್ವಜನಿಕರ ಜಾಲತಾಣದಲ್ಲಿ ಗೋ ಬ್ಯಾಕ್- ಅಂಜಲಿ ఎంబ ಸಂದೇಶಗಳು ಜಿಲ್ಲಾದ್ಯಂತ ಹರಡುತ್ತಿರುವುದು ವಿಶೇಷವಾಗಿದೆ..

ಭೌಗೋಳಿಕವಾಗಿ ಉತ್ತರ ಕನ್ನಡ ಜಿಲ್ಲೆಯು ವ್ಯಾಪಕವಾಗಿ ವಿಸ್ತಾರಗೊಂಡಿದ್ದು, ಜಿಲ್ಲೆಗೆ ಅಪರಿಚಿತವಾಗಿರುವ ವ್ಯಕ್ತಿಯನ್ನ ಲೋಕಸಭೆಗೆ ಅಭ್ಯರ್ಥಿಯಾಗಿ ಕಾಂಗ್ರೇಸ್ ಪಕ್ಷ ಮಾಡಲು ಹೊರಟಿರುವುದಕ್ಕೆ ಜಿಲ್ಲಾದ್ಯಂತ ವ್ಯಾಪಕವಾದ ಪ್ರತಿರೋಧ ವ್ಯಕ್ತವಾಗುತ್ತಿರುವುದು ಕಂಡುಬರುತ್ತಿದೆ.
ಇದನ್ನೂ ಓದಿ
- ತರಕಾರಿ ತುಂಬಿದ ಲಾರಿ ಪಲ್ಟಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
ಈಗಾಗಲೇ ಕಳೆದ ಆರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಸೋಲುಂಡರು ಇಂದಿಗೂ ಪಕ್ಷದ ಧುರೀಣರಿಗೆ ಬುದ್ದಿ ಬಂದಿಲ್ಲ. ಗೆಲ್ಲುವ ಸಂದರ್ಭದಲ್ಲಿ, ಅಪರಿಚಿತ ವ್ಯಕ್ತಿಯನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಲು ಪಕ್ಷ ಹೊರಟಿರುವುದಕ್ಕೆ ಕಾಂಗ್ರೇಸ್ ಪಕ್ಷದ ನಿರ್ಧಾರದ ಕುರಿತು ಕಾರ್ಯಕರ್ತರು ಜಿಲ್ಲಾದ್ಯಂತ ಬೇಸರ ವ್ಯಕ್ತಪಡಿಸಿದ್ದಾರೆ.
ಹೆರಿಕೆ ಅಭ್ಯರ್ಥಿಯಾದರೆ ಸಂಕಷ್ಟ..!
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕೂಡ, ಸ್ಥಳೀಯ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ವಿರೋಧ ನಡುವೆಯು ಕಾಂಗ್ರೆಸ್ ಹೈಕಮಾಂಡ ಹೆರಿಕೆಯ ಅಭ್ಯರ್ಥಿಯನ್ನನಾಗಿ ನಿವೇದಿತಾ ಆಳ್ವಾ ಅವರನ್ನ ಈಕ್ಷೇತ್ರದಿಂದ ಕಣಕ್ಕೆ ಇಳಿಸಿತ್ತು..ಇದರಿಂದಾಗಿ ಸುಲಭವಾಗಿ ಗೆಲ್ಲುವ ಅವಕಾಶವನ್ನ ಕಾಂಗ್ರೆಸ್ ಕೈಚೆಲ್ಲುವಂತಾಗಿರುವುದು ಪಕ್ಷದ ನಾಯಕರಿಗೆ ಚುನಾವಣಾ ಬಳಿಕ ಮನವರಿಕೆಯಾಗಿದೆ.
ಹೀಗಾಗಿ ಅಂದು ಸ್ಪರ್ಧಿಸಿದ ನಿವೇದಿತಾ ಆಳ್ವಾ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ನೀಡಲಾಗದೆ.ತಮ್ಮ ಠೇವಣಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿತ್ತು. ಆದರೆ ಈಗಲೂ ಸಹ ಕಾಂಗ್ರೆಸ್ ಏನಾದ್ರೂ ಆ ಪ್ರಯೋಗಕ್ಕೆ ಕೈ ಹಾಕಿದ್ದರೆ ಅಂದು ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಉಂಟಾದ ಪರಿಸ್ಥಿತಿ ಲೋಕಸಭಾ ಚುನಾವಣೆ ಯಲ್ಲಿಯೂ ಎದುರಾದರೂ ಅಚ್ಚರಿ ಪಡಬೇಕಾಗಿಲ್ಲ..ಕಾಂಗ್ರೆಸ್ ನಾಯಕರು ಅಭ್ಯರ್ಥಿಯ ಹೆಸರನ್ನ ಘೋಷಣೆ ಮಾಡುವ ಮುನ್ನ ಮತ್ತೊಮ್ಮೆ ಆಲೋಚನೆ ಮಾಡದೆ ಆತುರದ ನಿರ್ಧಾರಕ್ಕೆ ಕೈ ಹಾಕಿದ್ದರು.ಸುಲಭಾಗಿ ಗೆಲ್ಲುವ ಕ್ಷೇತ್ರವನ್ನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗುವ ಎಲ್ಲಾ ಸಾಧ್ಯತೆಗಳು ಇದೆ..