ಸುದ್ದಿಬಿಂದು ಬ್ಯೂರೋ
MURUDESWR:ಮುರುಡೇಶ್ವರ :ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ರೈಲ್ವೆ ಮಾರ್ಗದ ಸಮೀಪದ ಭಾರೀ ಬೆಂಕಿ ತಗಲಿರುವ ಘಟನೆ ನಡೆದಿದೆ.

ಇಲ್ಲಿನ ರೈಲ್ವೆ ಮಾರ್ಗದ ಸಮೀಪ ಇದ್ದ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸುಮಾರು ಒಂದು ಏಕರೆಗೂ ಅಧಿಕ ಜಾಗದಲ್ಲಿ ಒಣಗಿದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ. ಈಗಾಗಲೇ ಸ್ಥಳಕ್ಕೆ ಮುರುಡೇಶ್ವರ ಪಿಎಸ್ ಭೇಟಿ ನೀಡಿದ್ದಾರೆ.

ಅಗ್ನಿಶಾಮ ದಳಕ್ಕೆ ಮಾಹಿತಿ ರವಾನಿಸಲಾಗಿದ್ದು, ಬೆಂಕಿ ನಂದಿಸಲು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ. ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.