ಕಾರವಾರ/ಕುಮಟಾ: ಉತ್ತರಕನ್ನಡ ಜಿಲ್ಲೆಯ ಎರಡು ಪ್ರಮುಖ ಬಂದರುಗಳಲ್ಲಿ ಬಾಂಬ್ ಇಡಲು ಬಂದಿದ್ದ 10ಕ್ಕೂ ಹೆಚ್ಚು ಶಂಕಿತ ಉಗ್ರರನ್ನ ಬಂಧಿಸಿ ಆಗಬಹುದಾಗಿದ್ದ ಅನಾಹುತವನ್ನ ಪೊಲೀಸರು ತಡೆದಿದ್ದಾರೆ.
ಕಾರವಾರ ಹಾಗೂ ತದಡಿ ಬಂದರಿನಲ್ಲಿ 18 ಶಂಕಿತ ಉಗ್ರರನ್ನ ಬಂಧಿಸಲಾಗಿದ್ದು ಇನ್ನೂ ಅವರ ಬಳಿ ಇದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.ಇದು ನಿಜವಲ್ಲ. ಓದುಗರು ಭಯಪಡ ಬೇಕಾಗಿಲ್ಲಿ. ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ನಡೆದ ಸಾಗರ ಕವಚ ಅಣಕು ಕಾರ್ಯಾಚರಣೆಯ ಒಂದು ಸನ್ನಿವೇಶ ಇದಾಗಿದೆ..
ಕಾರವಾರ ಬಂದರಿನ ಮೇಲೆ ದಾಳಿ ಮಾಡಲು ಆಗಮಿಸಿದ್ದ 8 ಜನ ಶಂಕಿತರನ್ನು ಅರಬ್ಬಿ ಸಮುದ್ರದಲ್ಲಿ ಸಿಎಸ್‌ಪಿ ಅಧಿಕಾರಿಗಳು ಇನ್ಸ್ಪೆಕ್ಟರ್ ನಿಶ್ಚಲಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಇನ್ನೂ ತದಡಿ ಬಂದರಿನಲ್ಲಿ ಕರಾವಳಿ ಕಾವಲು ಪಡೆ ಪೊಲೀಸರು ಬೆಳಗಿನ ಜಾವ ನಕಲಿ ಭಯೋತ್ಪಾದಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೋಟ್ ಮೂಲಕ ಇಲ್ಲಿಗೆ ಬಂದ 10 ಜನರ ರೆಡ್-ಸ್ಕ್ಯಾಡ್ ತಂಡದ ಬಳಿಯಿದ್ದ ಹುಸಿ ಬಾಂಬ್‌ನ್ನು ವಶಕ್ಕೆ ಪಡೆಯಲಾಗಿದೆ.
ಈ ತಂಡದಲ್ಲಿ ಪೊಲೀಸ್ ಸಿಬ್ಬಂದಿ ಸೇರಿ ನೌಕಾದಳದವರು ಸಹ ಪಾಲ್ಗೊಂಡಿದ್ದಾರೆ. ಕುಮಟಾ ಕರಾವಳಿ ಕಾವಲು ಪಡೆಯ ಸಿಪಿಐ ವಿಕ್ಟರ್ ಸೈಮನ್, ಪಿಎಸ್‌ಐ ಅನುಪ್ ನಾಯಕ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಹಾಜರಿದ್ದರು.