ಸುದ್ದಿಬಿಂದು ಬ್ಯೂರೋ
ಕಾರವಾರ : ಇನ್ನೇನು ಆರೇಳು ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಕ್ಷೇತ್ರವನ್ನ ಗೆಲ್ಲಬೇಕು ಎನ್ನುವ ಲೆಕ್ಕಾಚಾರದಲ್ಲಿ ಅಭ್ಯರ್ಥಿ ಆಯ್ಕೆ ಕಸರತ್ತು ನಡೆಸುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ನಿಂದ(Congress)ಯಾರನ್ನ ಕಣಕ್ಕಿಳಿಸಿಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದ್ದು, ಡಾ ಅಂಜಲಿ ನಿಂಬಾಳಕರ್(Anjali Nimbakar)ಅವರನ್ನ ಕಣಕ್ಕೆ ಇಳಿಸಿದೆ ಉತ್ತಮ ಎನ್ನುವ ವಿಚಾರ ಜಿಲ್ಲೆಯ ಕಾಂಗ್ರೆಸ್ ನ ಪ್ರಮಖ ನಾಯಕರ ಮನದಲ್ಲಿ ಮೂಡಿದೆ.
ಉತ್ತರಕನ್ನಡ ಲೋಕಸಭಾ(Uttara Kannada Lok Sabha) ಕ್ಷೇತ್ರದಿಂದ ಈ ಬಾರಿ ಯಾರೆ ಸ್ಪರ್ಧೆ ಮಾಡಿದ್ದರೂ ಗೆಲುವು ನಿಶ್ಚಿತ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರಲ್ಲಿದೆ. ಈ ನಡುವೆ ಕಾಂಗ್ರೆಸ್ ನಿಂದ ಸಾಕಷ್ಟು ಅಭ್ಯರ್ಥಿ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಪ್ರಮುಖವಾಗಿ ನ್ಯಾಯವಾದಿ ಜಿ ಟಿ ನಾಯ್ಕ, ಅರಣ್ಯ ಅತಿಕ್ರಮಣದಾರ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷ ರವೀಂದ್ರನಾಥ್ ನಾಯ್ಕ, ಕುಮಟಾದ ಆರ್ ಎಚ್ ನಾಯ್ಕ, ಸಹ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆಗೆ ಸಿದ್ದರಾಗಿದ್ದಾರೆ.
ಈ ನಡುವೆ ಈ ಭಾರೀಯ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿರುವ ಸೂರಜ್ ನಾಯ್ಕ ಸೋನಿ ಅವರನ್ನ ಕಾಂಗ್ರೆಸ್ ಗೆ ಕರೆತಂದ್ದು, ಲೋಕಾ ಅಖಾಡಕ್ಕೆ ಇಳಿಸಬೇಕು ಎನ್ನುವ ಬಗ್ಗೆ ರಾಜ್ಯದ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಆದರೆ ಈ ಕ್ಷೇತ್ರವನ್ನ ಯಾರೇ ಸ್ಪರ್ಧೆ ಮಾಡಿದ್ದರು ಸಹ ಅರ್ಥಿಕವಾಗಿ ಸಧೃಡವಾಗಿರುವವರೆ ಬೇಕಾಗಿದೆ ಎನ್ನಲಾಗಿದೆ.
ಇನ್ನೊಂದೆಡೆ ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಹಳಿಯಾಳದ ಹಾಲಿ ಶಾಸಕರಾಗಿರುವ ಆರ್ ವಿ ದೇಶಪಾಂಡೆ ಅವರನ್ನ ಈ ಭಾರೀ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಬೇಕು ಎನ್ನುವ ಬಗ್ಗೆ ಸಹ ಚರ್ಚೆ ನಡೆದಿದೆ.ಈ ಬಗ್ಗೆ ಇನ್ನೂ ತನಕ ದೇಶಪಾಂಡೆ ತಮ್ಮ ನಿರ್ಧಾರವನ್ನ ಗಟ್ಟಿ ಮಾಡಿಲ್ಲ. ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಸುಲಭಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಕೂಡ ಇದೆ.
ಇನ್ನೂ ಅಂಜಲಿ ನಿಂಬಾಳಕರ್ ಅವರನ್ನ ಕಣಕ್ಕೆ ಇಳಿಸಿದರೆ ಅವರು ಖಾನಾಪುರ ಕ್ಷೇತ್ರದವರೆ ಆಗಿರುವ ಕಾರಣ ಕಿತ್ತೂರು ಹಾಗೂ ಖಾನಾಪುರ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನನ್ನ ಸೆಳೆದುಕೊಳ್ಳ ಬಹುದು, ಜೊತೆಗೆ ಅಂಜಲಿ ನಿಂಬಾಳಕರ್ ಮಠಾಟ ಸಮುದಾಯದವರಾಗಿರುವ ಕಾರಣ ಕಿತ್ತೂರ,ಖಾನಾಪುರ ಸೇರಿ ಜಿಲ್ಲೆಯಲ್ಲಿಯೂ ಮರಾಠ ಮತಗಳ ಜೊತೆಗೆ ಪ್ರಭಲವಾಗಿರುವ ನಾಮಧಾರಿ, ಅಲ್ಪಸಂಖ್ಯಾರು ಹಾಗೂ ಬ್ರಾಹ್ಮಣರ ಮತದಾರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಎಲ್ಲಾರೀತಿಯಲ್ಲೂ ಅಳೆದು ತೂಗಿರುವ ಕಾಂಗ್ರೆಸ್ ನಾಯಕರುಗಳು ಅಂಜಲಿ ನಿಂಬಾಳಕರ್ ಅವರನ್ನೆ ಕಣಕ್ಕಿಳಿಸುವುದು ಸೂಕ್ತ ಎನ್ನುತ್ತಿದ್ದಾರೆ.