ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯ ಜನರ ಬಹುದಿನಗಳ ಕಸನಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ(Multi Specialty Hospital) ಬೇಕು ಎನ್ನುವ ಹೋರಾಟ ಇದೀಗ ಮತ್ತೆ ಆರಂಭವಾಗಲಿದೆ. ಸಾಮಾಜಿಕ ‌ಹೋರಾಟಗಾರರಾಗಿರುವ ಅನಂತಮೂರ್ತಿ ಹೆಗಡೆ ಈ ಹೋರಾಟಕ್ಕೆ ಜೀವ ತುಂಬಲಿದ್ದಾರೆ. ನವಂಬರ್ 2 ರಿಂದ 9 ವರೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆ ಬೇಕು ಎನ್ನೂವ ಹೋರಾಟಕ್ಕೆ ಅನಂತಮೂರ್ತಿ ಹೆಗಡೆ ಶಕ್ತಿ ನೀಡಲಿದ್ದಾರೆ.ಈ ಹೋರಾಟ ನವೆಂಬರ್ 2ರಿಂದ ಮಲೆನಾಡಿನ ಹೆಬ್ಬಾಗಿಲು ಶಿರಸಿಯಿಂದ ಆರಂಭವಾಗಲಿದೆ. ಇದಕ್ಕೆ ಜಾನಪದ ಕೋಗಿಲೆ,‌ನಾಡೋಜಾ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮು ಗೌಡ ಸಹ ಬೆಂಬಲ ನೀಡಿದ್ದಾರೆ.

ಶಿರಸಿಯಿಂದ ಆರಂಭವಾಗಲಿರುವ ಈ ಪಾದಯಾತ್ರೆ ನನ್ನ ಸಂಪೂರ್ಣವಾಗಿರುವ ಬೆಂಬಲ ಇದೆ. ಈ ಹಿಂದೆ ಕೂಡ ಆಸ್ಪತ್ರೆ ಬೇಕು ಎನ್ನುವ ಹೋರಾಟಕ್ಕೆ ಬೆಂಬಲ‌ ನೀಡಿದ್ದೇನೆ ಈಗಲ ಸಹ ನೀಡುತ್ತೇನೆ. ನಮ್ಮ ಜಿಲ್ಲೆ ಜನ ತೀರಾ ಬಡವರಾಗಿದ್ದು, ಯಾವುದೇ ಕಾಯಿಲೆ ಬಂದರೂ ನಾವು ಬೇರೆ ಜಿಲ್ಲೆಯ ಆಸ್ಪತ್ರೆಯನ್ನೆ ನಂಬಿಕೊಳ್ಳಬೇಕಾಗಿದೆ. ಎಂದು ಪಾದಯಾತ್ರೆ ವಿಚಾರವಾಗಿ ಭೇಟಿಯಾಗಿದ್ದ ಅನಂತಮೂರ್ತಿ ಹೆಗಡೆ ಅವರಿಗೆ ಬೆಂಬಲ ನೀಡಿದ್ದು, ತಮ್ಮ ಪಾದ ಯಾತ್ರೆ ಅಂಕೋಲಾ ತಾಲೂಕಿಗೆ ಆಗಮಿಸ ಸಮಯದಲ್ಲಿ ತಾನು ಸಹ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಹೇಳುವ ಮೂಲಕ ಅನಂತಮೂರ್ತಿ ಅವರ ಪಾದಯಾತ್ರೆ ಇನ್ನಷ್ಟು ಶಕ್ತಿ ನೀಡಿದ್ದಾರೆ.

ಇನ್ನು ನವಂಬರ್ 2 ರಂದು ಶಿರಸಿಯಿಂದ ಪಾದಯಾತ್ರೆ ಪ್ರಾರಂಭವಾಗಿ ಶಿರಸಿ ಮೂಲಕ ದೇವಿಮನೆ ಘಟ್ಟ -ಕುಮಟಾ- ಅಂಕೋಲ- ಕಾರವಾರಕ್ಕೆ ಆಗಮಿಸಲಿದೆ.
ಪಾದಯಾತ್ರೆಯಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಚಿಂತಕ ಸಾಹಿತಿ, ಪರಿಸರವಾದಿ ಶಿವಾನಂದ ಕಳವೆ, ಪತ್ರಕರ್ತ ವಿನಾಯಕ ಭಟ್ ಮೂರೂರು, ಖ್ಯಾತ ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ರಾಜಕೀಯ ‌ಮುಖಂಡರಾದ ಕೆ‌ ಜೆ ನಾಯ್ಕ ಸಿದ್ದಾಪುರ, ಶಶಿಭೂಷಣ್ ಹೆಗಡೆ, ಶಿವಾನಂದ ಹೆಗಡೆ ಕಡತೋಕ, ಯಲ್ಲಾಪುರದ ಪ್ರಮೋದ್ ಹೆಗಡೆ, ಶಿರಸಿ ತಾಲೂಕಾ ಪೊಟೋಗ್ರಾಫರ್ ಸಂಘದ ತಾಲೂಕಾಧ್ಯಕ್ಷ ರಾಜು ಕಾನಸೂರರ ಸೇರಿದಂತೆ ಇನ್ನೂ ಅನೇಕ ಗಣ್ಯರು, ಹೋರಾಟಗಾರರು,ನ್ಯಾಯವಾದಿಗಳು ಈ ಒಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.