ಸುದ್ದಿಬಿಂದು ಬ್ಯೂರೋ
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುತ್ತಮುತ್ತ ಮನೆ ಹಾಗೂ ಬೈಕ್‌ ಕಳ್ಳತನ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನ‌ ಅಂಕೋಲಾ ಠಾಣಾ ಸಿಪಿಐ ಸಂತೋಷ ಶೆಟ್ಟಿ ಅವರ ತಂಡ ಆರೋಪಿಗಳನ್ನ ಬಂಧಿಸುವಲ್ಲಿ
ಯಶಸ್ವಿಯಾಗಿದ್ದಾರೆ.

ಮಹ್ಮದ್ ಸಲ್ಮಾನ್ ಗೌಸ್ (23), ರೋಹಿತ್ ಹರಿಜನ್(21) ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಅನೇಕ ದಿನಗಳಿಂದ ಅಂಕೋಲಾ ಸುತ್ತಮುತ್ತ ಮನೆ ಹಾಗೂ ಬೈಕ್ ಕಳ್ಳತನ ‌ಪ್ರಕರಣ ನಡೆದಿರುವ ಬಗ್ಗೆ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಬಳಿಕ ಆರೋಪಿಗಳ ಬಂಧನಕ್ಕೆ ಇಳಿದಿದ್ದ ಸಿಪಿಐ ಸಂತೋಷ ಶೆಟ್ಟಿ ಅವರ ನೇತೃತ್ವದ ಪೊಲೀಸ್ ತಂಡ ಇಬ್ಬರೂ ಚಾಲಾಕಿ ಕಳ್ಳರನ್ನ ಬಂಧಿಸಿ ಕಳ್ಳತನವಾಗಿದ್ದ ಎರಡು ಬೈಕ್ ವಶಕ್ಕೆ ‌ಪಡೆದಿದ್ದಾರೆ.

ಬಂಧಿತ ಆರೋಪಿಗಳಾಗಿರುವ ಮಹ್ಮದ ಸಲ್ಮಾನ್ ಗೌಸ್, ಈತ ಮಂಗಳೂರು ಜಿಲ್ಲೆಯ ಬೆಂಗ್ರೆ ನಿವಾಸಿಯಾಗಿದ್ದು, ಡಿ ಜೆ ಅಪರೇಟರ್‌ ಕೆಲಸ ಮಾಡುತ್ತಿದ್ದ,ಸದ್ಯ ಈತ ಮಂಗಳೂರಿನ,-7 ನೇ ಬ್ಲಾಕ್, ಜುಮ್ಮಾ ಮಸೀಧಿ ಹತ್ತಿರ, ಕೃಷ್ಣಾಪುರ, ಸುರತ್ಕಲ್ ನಲ್ಲಿ ವಾಸವಾಗಿದ್ದಾನೆ. ಮತ್ತೋರ್ವ ಆರೋಪಿ ರೋಹಿತ್ ಹರಿಜನ್ ಕಾರವಾರದ ಕೋಡಿಬಾಗ ನಿವಾಸಿಯಾಗಿದ್ದಾನೆ.ಬಂಧಿತರಿಂದ ಕದ್ದಿದ್ದ 2 ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಇನ್ನೂ ಬಂಧಿತ ಆರೋಪಿಗಳು ಹಿರೇಗುತ್ತಿ, ವಂದಿಗೆ, ಜಮಗೋಡ, ಶೆಟಗೇರಿಯಲ್ಲಿ ಮನೆ ಕಳ್ಳತನ ನಡೆಸಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಸಿಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿಎಸ್‌ಐ ಜಯಶ್ರೀ ಪ್ರಭಾಕರ್, ಉದ್ದಪ್ಪ ಧರೆಪ್ಪನವರ ತಂಡದ ಕಾರ್ಯಾಚರಣೆಯಲ್ಲಿದ್ದರು