ಸುದ್ದಿಬಿಂದು ಬ್ಯೂರೋ
ಮುಂಡಗೋಡ
: ಜಾನುವಾರು (ಎತ್ತು) ಒಂದಕ್ಕೆ‌ ವಿದ್ಯುತ್ ತಂತಿ ತಗುಲಿ (Farmer Death by Electricity) ಜಾನುವಾರು ಒದ್ದಾಡುತ್ತಿರುವುದನ್ನ ಗಮನಿಸಿದ ರೈತನೋರ್ವ‌ ಜಾನುವಾರು ರಕ್ಷಣೆ ಮಾಡಲು ಹೋಗಿ ಆತ ಸಹ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಡೆದಿದೆ.

ಸನವಳ್ಳಿ ಗ್ರಾಮದ ಈರಪ್ಪ ಯಲ್ಲಪ್ಪ ಕೆರೆಹೊಲದವರ (65) ಎಂಬುವವರೇ ವಿದ್ಯುತ್ ಅವಘಢದಲ್ಲಿ ಮೃತಪಟ್ಟಿರುವ ರೈತನಾಗಿದ್ದಾನೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಎತ್ತು ಒದ್ದಾಡುತ್ತಿತ್ತು. ಈ ವೇಳೆ ಅದನ್ನ ನೋಡಿದ ರೈತ ಈರಪ್ಪ ತನ್ನ ಎತ್ತು ರಕ್ಷಣೆ ಮಾಡಲು ಮುಂದಾಗಿದ್ದು. ಈ ವೇಳೆ ವಿದ್ಯುತ್ ರೈತನಿಗೆ ತಗುಲಿ ಆತನೂ ಕೂಡ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.

ಸದ್ಯ ಮುಂಡಗೋಡ ಪೊಲೀಸರು, ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.