ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ರೋಹಿತ್‌ ಶರ್ಮಾ(103) ಹಾಗೂ ಯಶಸ್ವಿ ಜೈಸ್ವಾಲ್(143) ವಿಂಡೀಸ್ ವಿರುದ್ಧದ 21 ವರ್ಷಗಳ ಹಿಂದಿನ ಟೆಸ್ಟ್ ದಾಖಲೆ ಮುರಿದಿದ್ದಾರೆ.

ಡೊಮಿನಿಕಾದಲ್ಲಿ ನಡೆಯುತ್ತಿರುವ ಪಂದ್ಯದ 2ನೆ ದಿನದಾಟದಲ್ಲೂ ಭಾರತೀಯ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ಅಬ್ಬರ ಮುಂದುವರೆಯಿತು. ಮೊದಲ ದಿನ ಮೊತ್ತ 80 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ರೋಹಿತ್‌ ಹಾಗೂ ಜೈಸ್ವಾಲ್, ವೆಸ್ಟ್ ಇಂಡೀಸ್ ಬೌಲರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಚೊಚ್ಚಲ ಪಂದ್ಯದಲ್ಲೇ ಜೈಸ್ವಾಲ್ ಶತಕ ಬಾರಿಸಿ ಮಿಂಚಿದ ರೋಹಿತ್ ಸಹ ಶತಕದ ಸಂಭ್ರಮ ಆಚರಿಸಿದರು. ಆ ಮೂಲಕ ಟೀಂ ಇಂಡಿಯಾಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ ತಂದುಕೊಡುವಲ್ಲಿ ಆರಂಭಿಕ ಜೋಡಿ ಯಶಸ್ವಿಯಾಯಿತು.

ಅಲ್ಲದೇ ತಮ್ಮ ಈ ಪ್ರದರ್ಶನದ ಮೂಲಕ ರೋಹಿತ್ ಹಾಗೂ ಜೈಸ್ವಾಲ್ ಜೋಡಿ, ಮೊದಲ ವಿಕೆಟ್‌ಗೆ 225 ರನ್‌ಗಳ ಅತ್ಯುತ್ತಮ ಜೊತೆಯಾಟ ಆಡುವ ಮೂಲಕ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳ ಜೊತೆಯಾಟವಾಡಿ ಹೊಸ ದಾಖಲೆ ಬರೆದಿದ್ದಾರೆ. ಆ ಮೂಲಕ ವೀರೇಂದ್ರ ಸೆಹ್ವಾಗ್ ಹಾಗೂ ಸಂಜಯ್ ಬಾಂಗರ್ ಹೆಸರಿನಲ್ಲಿದ್ದ 21 ವರ್ಷಗಳ ಹಿಂದಿನ ದಾಖಲೆಯನ್ನ ಬ್ರೇಕ್ ಮಾಡಿದರು. ಈ ಹಿಂದೆ 2002ರಲ್ಲಿ ಭಾರತದ ಪರ ಆರಂಭಿಕರಾದ ಸೆಹ್ವಾಗ್ ಹಾಗೂ ಬಾಂಗ‌ ಜೋಡಿ 201 ರನ್‌ಗಳಿಸಿದ್ದು, ಹಿಂದಿನ ದಾಖಲೆಯಾಗಿತ್ತು.

ರೋಹಿತ್‌ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅವರ ಅಮೋಘ ಶತಕದ ನೆರವಿನಿಂದ ಪಂದ್ಯದ ಮೇಲೆ ಟೀಂ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿದೆ. 2ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 312 ರನ್‌ಗಳಿಸಿರುವ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 162 ರನ್‌ಗಳ ಮುನ್ನಡೆ ಹೊಂದಿದೆ. ಭಾರತದ ಪರ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(143) ಹಾಗೂ ವಿರಾಟ್ ಕೊಹ್ಲಿ(36) ರನ್‌ಗಳಿಸಿ ಕಾಯ್ದುಕೊಂಡಿದ್ದಾರೆ. 3ನೇ ದಿನಕ್ಕೆ ಬ್ಯಾಟಿಂಗ್