ಸುದ್ದಿಬಿಂದು ಬ್ಯೂರೋ
ಜೋಯಿಡಾ : ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಮದ್ಯ ಸಾಗಾಟಕ್ಕೆ ಬಳಿಸಿದ ವಾಹನ, ಮದ್ಯ ಹಾಗೂ ಇಬ್ಬರೂ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿರುವ ಘಟನೆ ಅನಮೋಡ ಚೆಕಪೋಸ್ಟ ಬಳಿ ನಡೆದಿದೆ.
ಖಚಿತ ಮಾಹಿತಿ ಆಧಾರದ ಮೇಲೆ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ವಾಹನ ಮತ್ತು ಮದ್ಯವನ್ನ ವಶಕ್ಕೆ ಪಡೆಯಲಾಗಿದೆ. ಈಡಿಗ ವೆಂಕಟರಮಣ ಧನಂಜಯ ಗೌಡ, ಈಡಿಗ ರವಿ ಮದ್ದಿಲೇಟಿ ಆಂಧ್ರಪ್ರದೇಶ ಬಂಧಿತ ಆರೋಪಿಗಳಾಗಿದ್ದಾರೆ.
.ಅಶೋಕ ಲೈಲೆಂಡ್ ವಾಹನ ಸಂಖ್ಯೆ AP04 TZ 0727 ರಲ್ಲಿ 264 ಲೀ ಸರಾಯಿ 161.280 ಬಿಯರ್ ಸೇರಿ ವಿವಿಧ ರೀತಿಯ ಮದ್ಯ ಮತ್ತು ವಾಹನ ಸೇರಿ ಒಟ್ಟು ಅಂದಾಜು ಮೌಲ್ಯ 7,65,280 ರೂ. ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆ ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ ಜಗದೀಶ್ ಎನ್ ಕೆ ಹಾಗೂ ಅಬಕಾರಿ ಉಪ ಅಧಿಕ್ಷಕರು ಯಲ್ಲಾಪುರ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅನಮೋಡ ಅಬಕಾರಿ ಪಿ.ಎಸ್.ಐ ಟಿ.ಬಿ.ಮಲ್ಲಣ್ಣನವರ ಸಿಬ್ಬಂದಿಗಳಾದ ರಾಜು ಭಟ್ಕಲ್,ವಾಯ್ ಎಪ್ ಕಣ್ಣೂರ,ಯು ಎನ್ ತುಳಜಿ, ಎನ್ ಜಿ ಜೋಗಳೇಕರ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.