ಸುದ್ದಿಬಿಂದು ಬ್ಯೂರೋ
ಕುಮಟ : ಕಾಂಗ್ರೆಸ್ ಈಗಾಗಲೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು 224 ಕ್ಷೇತ್ರಗಳ ಪೈಕಿ 58ಕ್ಷೇತ್ರದಲ್ಲಿನ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಟಿಕೆಟ್ ಕೈ ತಪ್ಪಲಿದೆ ಎನ್ನುವ ಬಗ್ಗೆ ಮುನ್ಸೂಚನೆ ಸಿಕ್ಕಿರುವ ಶಾರದಾ ಶೆಟ್ಟಿ ಅವರು ನಾಳೆ (ಸೋಮವಾರ) ಆಪ್ತರ ಸಭೆ ಕರೆದಿದ್ದು, ಬಳಿಕ ಅವರು ಬಂಡಾಯದ ಬಗ್ಗೆ ತೀರ್ಮಾನಿಸಲಿದ್ದಾರೆ ಎನ್ನುವ ಚರ್ಚೆ ಆವರ ಆಪ್ತ ವಲಯದಿಂದ ಕೇಳಿ ಬಂದಿದೆ.
ಶಾರದಾ ಶೆಟ್ಟಿ ಅವರಿಗೆ ಈ ಬಾರಿ ಟಿಕೆಟ್ ನೀಡದಂತೆ 12 ಮಂದಿ ಕಾಂಗ್ರೆಸ್ ಆಕಾಂಕ್ಷಿಗಳು ಹೈಕಮಾಂಡ ಮೇಲೆ ಬಾರಿ ಒತ್ತಡ ಹಾಕಿದ್ದರು.ಇದಾದ ಬಳಿಕ ಇನ್ನೂಳಿದ 12ಮಂದಿಯಲ್ಲಿ ಟಿಕೆಟ್ ಪೈಪೋಟಿ ಜೋರಾಗಿ ನಡೆದಿದ್ದು, ಕೊನೆ ಕ್ಷಣದಲ್ಲಿ ಮಂಜುನಾಥ ಎಲ್ ನಾಯ್ಕ ಹಾಗೂ ನಿವೇದಿತಾ ಆಳ್ವ ನಡುವೆ ಈಗಲ್ಲೂ ಟಿಕೆಟ್ ಫೈಟ್ ಮುಂದುವರೆದಿದೆ. ಹೀಗಾಗಿ ಎಲ್ಲೋ ಒಂದು ಕಡೆ ಹೈಕಮಾಂಡ ತಮ್ಮಗೆ ಟಿಕೆಟ್ ನೀಡುವುದಿಲ್ಲ ಎನ್ನುವುದನ್ನ ಅರಿತ ಶಾರದಾ ಶೆಟ್ಟಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಕಣಕ್ಕಿಳಿಯುವ ಬಗ್ಗೆ ಸಭೆ ನಡೆಸಲಿದ್ದಾರೆ ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.
ನಾಳೆ (ಸೋಮವಾರ) ನಡೆಯುವ ಸಭೆಗೆ ಬರುವಂತೆ ಆಪ್ತರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆನ್ನಲಾಗಿದೆ. ಈ ಭಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡದೆ ಹೋದಲ್ಲಿ ಪಕ್ಷೇತರ ಸ್ಪರ್ಧೆ ಮಾಡುವ ಬಗ್ಗೆ ಆರು ತಿಂಗಳ ಹಿಂದೆಯೇ ಅನುಮಾನದ ಗುಂಡನ್ನ ಕಾರ್ಯಕರ್ತರ ಬಳಿ ಎಸೆದಿರುವುದು ಈಗ ಇಂಬು ಬಂದಿದೆ. ನಿಜವಾಗಲ್ಲಿ ಬಂಡಾಯ ಹೋಗತ್ತಾರ..? ಒಂದು ವೇಳೆ ಬಂಡಾಯವಾದ್ರೆ ಯಾವ ಬಲದ ಮೇಲೆ ಹೋಗತ್ತಾರೆ. ಹಣ ಬಲವೊಂದೆ ಇದ್ದರೆ ಚುನಾವಣೆ ಎದುರಿಸುವುದು ಕಷ್ಟ ಎನ್ನುವುದು ಅವರಿಗೂ ಗೋತ್ತಿರುವ ವಿಚಾರವೆ. ಕೊನೆಕ್ಷಣದಲ್ಲಿ ಹೈಕಮಾಂಡ ಗಮನ ಸೆಳೆಯುವ ತಂತ್ರನಾ ಎನ್ನುವ ಚರ್ಚೆಗಳು ಸಹ ನಡೆಯುತ್ತಿದೆ.