ಸುದ್ದಿಬಿಂದು ಬ್ಯೂರೋ
ಬೆಂಗಳೂರು :
ಮೇ 10ರಂದು ರಾಜ್ಯವಿಧಾನಸಭಾ ಚುನಾವಣೆ ನಡೆಯಲಿದ್ದು,ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ, ಹಲವು ಸುತ್ತಿನ ಸಭೆ ನಡೆಸಿರುವ ಬಿಜೆಪಿ ರಾಜ್ಯ ನಾಯಕರು ಇದೀಗ ಅಭ್ಯರ್ಥಿಗಳ ಪಟ್ಟಿಯನ್ನ ಸಿದ್ದಪಡಿಸಿ ಕೇಂದ್ರ ನಾಯಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ 224ಕ್ಷೇತ್ರಗಳ ಪೈಕಿ ಮೊದಲ‌ ಹಂತದಲ್ಲಿ 90 ರಿಂದ 100 ಅಭ್ಯರ್ಥಿಗಳ ಹೆಸರನ್ನ ಬಿಡುಗಡೆಯಾಗುವ ಸಾಧ್ಯತೆ ಇದೆ. ಮೊದಲ ಪಟ್ಟಿ ಏಪ್ರೀಲ್ 8-9ರಂದು ಅಭ್ಯರ್ಥಿಗಳ ಹೆಸರು ಘೋಷಣೆ ಆಗುವ ಸಾಧ್ಯತೆ ಇದೆ.
ಪ್ರತಿಕ್ಷೇತ್ರದಿಂದ ಹಾಲಿ ಶಾಸಕರು ಸೇರಿ ಮೂವರ ಹೆಸರನ್ನ ಪಟ್ಟಿಯಲ್ಲಿ ಸೇರಿಸಲಾಗಿದೆ.ಯಾವೇಲ್ಲಾ ಹಾಲಿ ಶಾಸಕರಿಗೆ ಗೆಲ್ಲುವ ಸಾಮರ್ಥ್ಯ ಇಲ್ಲ. ಅಂತಹ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನ ಕೈ ಬಿಟ್ಟು ಹೊಸ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವ ಸಾಧ್ಯತೆ ಕೂಡ ಇದೆ.

ಟಿಕೆಟ್ ಕುರಿತಾಗಿ ಈಗಾಗಲೇ ಬಿಜೆಪಿ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಹಲವು ಸುತ್ತಿನ ಸಮೀಕ್ಷೆ ನಡೆಸಿದ್ದು, ಬಿಜೆಪಿಯೆ ನಡೆಸಿರುವ ಈ ಸಮೀಕ್ಷೆಯಲ್ಲಿ ರಾಜ್ಯದ ಅನೇಕ ಕ್ಷೇತ್ರದಲ್ಲಿ ಹಾಲಿ ಶಾಸಕರ ವಿರುದ್ಧ ಸಮೀಕ್ಷೆ ಬಂದಿದೆ ಎನ್ನಲಾಗಿದೆ.ಈ ಕಾರಣಕ್ಕಾಗಿಯೆ ಬಿಜೆಪಿ ಅಭ್ಯರ್ಥಿ ಹೆಸರನ್ನ ಘೋಷಣೆ ಮಾಡಲು ಹಿಂದೆಟ್ಟು ಹಾಕುತ್ತಿದೆ ಎನ್ನುವ ಬಗ್ಗೆ ಬಿಜೆಪಿಯಲ್ಲಿಯೆ ಚರ್ಚೆಗಳು ನಡಿಯುತ್ತಿದೆ.

ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಕೆಲ ಕ್ಷೇತ್ರದಲ್ಲಿ ಯಾರಿಗೆ ನೀಡಬೇಕು. ಎನ್ನುವ ಬಗ್ಗೆ ತೀರ್ಮಾನಿಸಿರುವ ಬಿಜೆಪಿ ರಾಜ್ಯ‌ನಾಯಕರು. ಹೈಕಮಾಂಡ ನಿರ್ದೇಶನದಂತೆ. ಆ ಕ್ಷೇತ್ರದ ಮಾಜಿ ಶಾಸಕರು ಹಾಗೂ ಕ್ಷೇತ್ರದಲ್ಲಿ ತನ್ನದೆ ಪ್ರಭಾವವನ್ನ ಹೊಂದಿರುವ ಇಬ್ಬರಿಂದ ಮೂವರ‌ ಜೊತೆ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಕೆಲವರಿಗೆ ಚುನಾವಣೆಗೆ ಸಿದ್ದರಾಗುಂತೆಯೂ ರಾಜ್ಯ ನಾಯಕರು ಸೂಚನೆ ನೀಡಿದ್ದಾರಂತೆ. ಅದು ಏನೆ ಆದರೂ ಅಭ್ಯರ್ಥಿ ಹೆಸರು ಘೋಷಣೆ ಆದ ಬಳಿಕವೆ ಎಲ್ಲದಕ್ಕೂ ಸ್ಪಷ್ಟ ‌ಚಿತ್ರಣ ಸಿಗಲಿದೆ.