ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ
: ಉತ್ತರಕನ್ನಡ ಜಿಲ್ಲೆಯ ಬಹುಸಂಖ್ಯಾತ ಮತದಾರರನ್ನ ಹೊಂದಿರುವ ನಾಮಧಾರಿ ಸಮುದಾಯದ ವ್ಯಕ್ತಿಗಳಿಗೆ ಎರಡರಿಂದ ಮೂರು ಕ್ಷೇತ್ರದಲ್ಲಿ ಟಿಕೇಟ್ ನೀಡಬೇಕು ಎಲ್ಲದೆ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಈಡಿಗ,ಬಿಲ್ಲವ,ನಾಮಧಾರಿ ಸಮುದಾಯದ ಸ್ವಾಮೀಜಿ ಪ್ರಣವನಾಂದ‌ ಸ್ವಾಮೀಜಿ ಆಗ್ರಹಿಸಿದ್ದಾರೆ.

ಜಿಲ್ಲೆಯ ಶಿರಸಿ,ಕುಮಟಾ ಹಾಗೂ ಭಟ್ಕಳದಲ್ಲಿ ನಾಮಧಾರಿ‌ ಮತದಾರರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇನ್ನೂ ಯಲ್ಲಾಪುರ, ಕಾರವಾರ-ಅಂಕೋಲಾ ಕ್ಷೇತ್ರದಲ್ಲಿಯೂ ಸಹ ನಾಮಧಾರಿಗಳೆ ನಿರ್ಣಾಯಕರಾಗಿದ್ದಾರೆ.ಸಂಪೂರ್ಣವಾಗಿ ಕಾಂಗ್ರೆಸ್ ‌ನಾಮಧಾರಿಗಳನ್ನ ದೂರ ಸರಿಸುವ ಕೆಲಸ ಮಾಡಿದ್ದೆ ಹೌದಾದರೆ ಅದರ ಪರಿಣಾವನ್ನ ಕಾಂಗ್ರೆಸ್ ರಾಜ್ಯಾದ್ಯಂತ ಎದುರಿಸಬೇಕಾಗುತ್ತದೆ.
ಇದಕ್ಕೆಲ್ಲಾ ಆರ್ ವಿ ದೇಶಪಾಂಡೆ ಅವರು ನೇರ ಹೊಣೆಯಾಗಿದ್ದಾರೆ.

ಎಲ್ಲಾ ಕ್ಷೇತ್ರದಲ್ಲಿ ಮೇಲ್ವರ್ಗದವರಿಗೆ ಕಾಂಗ್ರೆಸ್ ಟಿಕೇಟ್ ನೀಡುವು ಹುನ್ನಾರ ನಡೆಸುತ್ತಿದ್ದಾರೆ.ದೇಶಪಾಂಡೆ ಅವರಿಂದ ನಾಮಧಾರಿ ಸಮಾಜವನ್ನ‌ ತುಳಿಯುವ ಕೆಲಸವಾಗುತ್ತಿದೆ.ಈ ಹಿಂದಿನಿಂದಲ್ಲೂ ಜಿಲ್ಲೆಯಲ್ಲಿ ನಾಮಧಾರಿಗಳಿಗೆ ಟಿಕೇಟ್ ‌ನೀಡಲಾಗುತ್ತಾ ಬರಲಾಗಿದೆ. ಎರಡನೇ‌ ಪಟ್ಟಿಯಲ್ಲಿ ಮೂರು ಕ್ಷೇತ್ರದಲ್ಲಿ ನಾಮಧಾರಿ ಸಮುದಾಯದವರಿಗೆ ಟಿಕೇಟ್ ನೀಡಬೇಕು.

ಈಗಾಗಲೆ ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದೇನೆ.ಇಂದು ಅಥವಾ ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿ ಮಾತು ಕತೆ ನಡೆಸಲಿದ್ದೇ‌ನೆ. ಒಮ್ಮೊಮ್ಮೆ ನಮ್ಮ ನಾಮಧಾರಿ ಸಮುದಾಯಕ್ಕೆ ಟಿಕೇಟ್ ನೀಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ