ಶಿರಸಿ : ಚುನಾವಣೆ ಬಂದಾಗ ಪ್ರತಿಯೊಬ್ಬರು. ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೆ ಹರಿಸಿಬಿಡುವ ಭರವಸೆ ನೀಡಿ ಗೆದ್ದ ಬಳಿಕ ಅಭಿವೃದ್ಧಿಯನ್ನ ಮರೆತು ಬಿಡುತ್ತಾರೆ. ಅದೆ ರೀತಿ ಶಿರಸಿ ತಾಲೂಕಿನ ಬನವಾಸಿಯ ಗುಡ್ನಾಪುರ ಗ್ರಾ ಪಂ ವ್ಯಾಪ್ತಿಯ ಅಜ್ಜರಣಿ ಹಾಗೂ ಮತಗುಣಿ ಗ್ರಾಮದ ಜನರು ಈ ಬಾರಿಯ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಗುಡ್ನಾಪುರ ಗ್ರಾಮದ ಅಜ್ಜರಣಿ ಹಾಗೂ ಮತಗುಣಿ ಗ್ರಾಮದ ಜನರು ಸೇತುವೆ ನಿರ್ಮಾಣಕ್ಕಾಗಿ ಒತ್ತಾಯಿಸುತ್ತಾ ಬಂದಿದ್ದು, ಸೇತುವೆ ನಿರ್ಮಾಣವಾಗದ ಹಿನ್ನಲೆಯಲ್ಲಿ ಚುನಾವಣಾ ಬಹಿಷ್ಕಾರದ ಬಗ್ಗೆ ಎಚ್ಷರಿಕೆ ನೀಡಿದ್ದಾರೆ. ಅಜ್ಜರಣಿ ಗ್ರಾಮವನ್ನ ಪ್ರವೇಶಿಸುವ ಮಾರ್ಗದಲ್ಲಿ ಚುನಾವಣೆ ಬಹಿಷ್ಕಾರ ಮಾಡುವ ಬಗ್ಗೆ ಬ್ಯಾನರ್ ಹಾಕಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಇಲ್ಲಿ ಇರುವ ಸೇತುವೆ ಶಿಥಿಲವಾಗಿದ್ದು, ಈ ಸೇತುವೆ ಮೇಲೆ ಸಂಚಾರ ಅಪಾಯಕಾರಿಯಾಗಿದೆ. ಹೀಗಾಗಿ ಇಲ್ಲಿ ಒಂದು ಹೊಸ ಸೇತುವೆಯನ್ನ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಕಳೆದ ಮೂರೂ ನಾಲ್ಕು ವರ್ಷಗಳಿಂದ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡುತ್ತ ಬಂದಿದ್ದಾರೆ. ಆದರೆ ಇದುವರೆಗೆ ಇಲ್ಲಿನ ಜನಪ್ರತಿನಿಧಿಗಳು ಗ್ರಾಮಸ್ಥರ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ ಎನ್ನುವ ಕಾರಣಕ್ಕೆ ಈ ಬಾರಿ ಇಲ್ಲಿನ ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ..