ಕಾರವಾರ : ಅರಬ್ಬಿ ಸಮುದ್ರದಲ್ಲಿ ಅನಧಿಕೃತ ಲೈಟ್ ಫಿಶಿಂಗ್ ನೆಡೆಸುವುದನ್ನು ವಿರೋಧಿಸಿ ನಾಡದೋಣಿ ಹೋರಾಟ ಸಮಿತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಉತ್ತರಕನ್ನಡ ಜಿಲ್ಲೆಯ ಕಡಲತೀರದಲ್ಲಿ ಅನ್ಯರಾಜ್ಯ ಹಾಗೂ ಜಿಲ್ಲೆಯ ಮೀನುಗಾರರು ಅನಧಿಕೃತವಾಗಿ ನಿರಂತರ ಲೈಟ್ ಫಿಶಿಂಗ್ ಮಾಡುತಿದ್ದು ಅವೈಜ್ಞಾನಿಕ ಫಿಶಿಂಗ್ ನಿಂದ ಮೀನಿನ ಸಂತತಿಗೆ ದಕ್ಕೆ ಉಂಟಾಗುತ್ತಿದೆ.ಮೀನುಗಾರಿಕಾ ಇಲಾಖೆಗೆ ಮಾಹಿತಿ ಇದ್ದರೂ ನಿಷೇಧಿತ ಲೈಟ್ ಫಿಷಿಂಗ್ ತಡೆಯದೇ ಸಹಕರಿಸುತಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದರು.
ತಕ್ಷಣ ನಿಷೇಧಿತ ಲೈಟ್ ಫಿಷಿಂಗ್ ನನ್ನು ಬಂದ್ ಮಾಡಿಸದಿದ್ದರೇ ಉಗ್ರ ಪ್ರತಿಭಟನೆ ಮಾಡುವುದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೀನ ಮೀನುಗಾರರು ಎಚ್ಚರಿಕೆ ನೀಡಿದ್ದರು. ಇನ್ನೂ ಈ ಪ್ರತಿಭಟನೆಗೆ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಬೆಂಬಲ ಸೂಚಿಸಿದ್ದು, ತಮ್ಮ ಜೊತೆ ಸದಾ ಇರುವುದಾಗಿ ಭರವಸೆ ನೀಡಿದ್ದರು
ಪ್ರತಿಭಟನೆಯಲ್ಲಿ ಕಾರವಾರದಿಂದ ಭಟ್ಕಳದವರೆಗಿನ ಸಾವಿರಾರು ಮೀನುಗಾರರು ಪಾಲ್ಗೊಂಡಿದ್ದರು.