ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ನಿರಂತರ ಏರಿಕೆಯನ್ನು ಕಂಡು ಬರುತ್ತಿದ್ದ ಬಂಗಾರದ ಬೆಲೆ ಇಂದೂ ಕಡಿಮೆಯಾಗಿದೆ. ಇಂದು ಎರಡನೇ ದಿನವೂ ಇಳಿಕೆಯಾಗಿದೆ. ಹಾಗಾದರೆ, ಇಂದಿನ ಬಂಗಾರ ಮತ್ತು ಬೆಳ್ಳಿ ಬೆಲೆ ಎಷ್ಟಿದೆ.? ಜೊತೆಗೆ ನಿತ್ಯದ ಸುದ್ದಿಗಾಗಿ www.suddibindu.in ಫಾಲೋ ಮಾಡತ್ತಾ ಇರಿ

ಇಂದಿನ ಬೆಲೆ ಎಷ್ಟು?
ದೇಶೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 27ರಂದು 22 ಕ್ಯಾರೆಟ್ ಬಂಗಾರದ ಬೆಲೆ ಪ್ರತಿ ಗ್ರಾಂಗೆ ₹40 ಕಡಿಮೆಯಾಗಿದೆ. ಈ ಪ್ರಕಾರ, 1 ಗ್ರಾಂ ಬಂಗಾರದ ಬೆಲೆ ₹8,010 ಆಗಿದೆ. 24ಕ್ಯಾರೆಟ್ ಬಂಗಾರದ ಬೆಲೆಯೂ ₹44 ಇಳಿಮುಖವಾಗಿದ್ದು, 1ಗ್ರಾಂ ಬಂಗಾರದ ಹೊಸ ಬೆಲೆ ₹8,738 ಆಗಿದೆ.

10 ಗ್ರಾಂಗೆ ಎಷ್ಟು?
10 ಗ್ರಾಂ 22 ಕ್ಯಾರೆಟ್ ಬಂಗಾರದ ಬೆಲೆ ₹80,100 ಆಗಿದ್ದು, 10 ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ ₹87,380 ಆಗಿದೆ. ಬುಧವಾರದಿಂದ ಗುರುವಾರದವರೆಗೆ ₹400 ಕಡಿಮೆಯಾಗಿದೆ, ಶುದ್ಧ ಬಂಗಾರದ ಬೆಲೆ ₹440 ಇಳಿದಿದೆ.

ಬೆಂಗಳೂರಲ್ಲಿ ಬಂಗಾರದ ಬೆಲೆ
ಬೆಂಗಳೂರು ನಗರದಲ್ಲಿ 1 ಗ್ರಾಂ 22 ಕ್ಯಾರೆಟ್ ಬಂಗಾರದ ಬೆಲೆ ₹8,010 ಆಗಿದೆ. ಬೆಳ್ಳಿ ಬೆಲೆಯೂ ಕಡಿಮೆಯಾಗಿದ್ದು, 1 ಗ್ರಾಂ ಬೆಳ್ಳಿಯ ಬೆಲೆ ₹101 ರಿಂದ ₹98 ಕ್ಕೆ ಇಳಿದಿದೆ. 1 ಕೆಜಿ ಬೆಳ್ಳಿಯ ಬೆಲೆ ₹98,000 ಆಗಿದೆ.

ಇದನ್ನೂ ಓದಿ