ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಜನಪ್ರಿಯಳಾದ ‘ಮೋನಾಲಿಸಾ’ ಎಂಬ ಅಗ್ರಸ್ಥಾನ ಪಡೆದ ಮಗಳನ್ನ, ಆಕೆಯ ತಂದೆ ಇಂದೋರ್ಗೆ ಮನೆಗೆ ಕರೆಸಿಕೊಂಡಿದ್ದಾರೆ.
ಆಕರ್ಷಕ ನೀಲಿ ಕಣ್ಣುಗಳ ಮೂಲಕ ಸಾವಿರಾರು ಜನರ ಹೃದಯವನ್ನು ಸೆಳೆಯಿದ್ದ ಮೋನಾಲಿಸಾ ಭೋನ್ಸ್ಲೆ, ವಿಡಿಯೋ ಮೂಲಕ 15 ಮಿಲಿಯನ್ ವೀಕ್ಷಣೆಗಳನ್ನು ಹೊಂದುವುದರೊಂದಿಗೆ ಸಖತ್ ಜನಪ್ರಿಯತೆ ಆಗಿದ್ದರು. ಆದರೆ ಮಹಾ ಕುಂಭಮೇಳದಲ್ಲಿ ಮಣಿ ಸರ ಮಾರಾಟಮಾಡುವ ಯುವತಿಗೆ ಅದು ಸಾಕಷ್ಟು ಅಡ್ಡಿ ಉಂಟಾಗುವಂತಾಗಿತ್ತು. ಸಾಮಾಜಿಕ ಮಾಧ್ಯಮ ಬಳಕೆದಾರ ಸಚಿನ್ ಗುಪ್ತಾ, ಪ್ಲಾಟ್ಫಾರ್ಮ್ Xನಲ್ಲಿ ಈ ಸುದ್ದಿಯನ್ನು ಹಂಚಿಕೊಂಡು, ಆಕೆಯ ಬಳಿ ಮಾಲೆಗಳನ್ನು ಖರೀದಿಸಲು ಬರುವ ಬದಲು, ಅಪಾರ ಸಂಖ್ಯೆಯ ಜನರು ಸೆಲ್ಫಿಗಳು ಮತ್ತು ವಿಡಿಯೋಗಳನ್ನು ತೆಗೆಯಲು ಸೇರುತ್ತಿದ್ದರೆಂದು ತಿಳಿಸಿದ್ದಾರೆ.
ಕೇವಲ ಕೆಲವೇ ಗ್ರಾಹಕರು ಮಾಲೆಗಳನ್ನು ಖರೀದಿಸುತ್ತಿದ್ದರು, ಆದರೆ ಅನೇಕರು ಆಕೆಯೊಂದಿಗೆ ಪೊಟೋಗಳನ್ನ ಸೆರೆಹಿಡಿಯಲು ಹೆಚ್ಚು ಮುಗಿಬಿಳುತ್ತಿದ್ದರಂತೆ. ಈ ಕಾರಣದಿಂದಾಗಿ, ಆಕೆಯ ತಂದೆ ಆಕೆಯನ್ನು ವಾಪಸ್ ಮನೆಗೆ ಹಿಂದಿರುಗಿಸಲು ತೀರ್ಮಾನಿಸಿದರು. ಪೊಟೋ ತೆಗೆಸಿಕೊಳ್ಳಲು ಜನ ಮುಗಿಬಿಳುತ್ತಿದ್ದಂತೆ ಜನರಿಂದ ತಪ್ಪಿಸಿಕೊಳ್ಳಲು ಮೋನಾಲಿಸಾ ಮಾಸ್ಕ್ ಹಾಕಿಕೊಂಡು ವ್ಯಾಪಾರ ಸಹ ಮಾಡಿದ ಕ್ಷಣಗಳು ಎದುರಾಗಿದ್ದವು, ಆದರೂ ಜನರಿಂದ ತಪ್ಪಿಸಿಕೊಂಡು ಮಣಿಸರ ವ್ಯಾಪಾರ ಮಾಡುವುದು ಆಕೆಗೆ ಕಷ್ಟವಾಗಿದೆಯಂತೆ..
‘ಬ್ರೌನ್ ಬ್ಯೂಟಿ’ ಎಂದು ನೆಟಿಗರು ಪ್ರೀತಿಯಿಂದ ಕರೆಯುತ್ತಿದ್ದ ಮೋನಾಲಿಸಾ, ತನ್ನ ಸರಳತೆ ಮತ್ತು ಆಕರ್ಷಕತೆಯಿಂದ ವಿಶ್ವದಾದ್ಯಂತ ಜನರ ಮನಸ್ಸಿನಲ್ಲಿ ಅಚ್ಚಳಿಯಲಾಗದ ಪ್ರಭಾವವನ್ನು ಬಿಟ್ಟಿದ್ದಾಳೆ. ಆದರೆ, ಆಕೆಯ ವೈರಲ್ ಜನಪ್ರಿಯತೆಯೇ ಆಕೆಯ ಜೀವನೋಪಾಯಕ್ಕೆ ಅಡ್ಡಿಪಡಿಸಿತು. ಯೂಟ್ಯೂಬರ್ಗಳು ಆಕೆಯ ವಿಶೇಷ ಫೋಟೋ ಮತ್ತು ವಿಡಿಯೋಗಳಿಗಾಗಿ ಹುಡುಕುತ್ತಿದ್ದರು, ಇದರಿಂದಾಗಿ ಆಕೆಯ ಮುಖ್ಯ ವ್ಯಾಪಾರ ಚಟುವಟಿಕೆ ಸಂಪೂರ್ಣ ಕುಸಿತವಾಗಿದೆ..
ಮಗಳ ಪರಿಸ್ಥಿತಿಯನ್ನು ಗಮನಿಸಿದ ಮೋನಾಲಿಸಾ ತಂದೆ, ಹೆಚ್ಚಿನ ಕಾಲ ಮೇಳದಲ್ಲಿ ಉಳಿಯುವುದು ಪ್ರಯೋಜನಕಾರಿಯಲ್ಲವೆಂದು ತೀರ್ಮಾನಿಸಿ, ಅವರನ್ನು ಮಧ್ಯಪ್ರದೇಶದ ಇಂದೋರ್ಗೆ ಮನೆಗೆ ಕರೆಸಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ.
ಇದನ್ನೂ ಓದಿ