ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ:
ತಾಲೂಕಿನ ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಚಿರತೆ ಕಾಟ ಹೆಚ್ಚುತ್ತಲ್ಲೆ ಇದ್ದು, ಇಷ್ಟುದಿನ ನಾಯಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯು ಇತ್ತಿಚೀಗೆ ಒಂಟಿಯಾಗಿ ಹೋಗುತ್ತಿರುವವ ಮೇಲೆ ದಾಳಿ ಮಾಡುತ್ತಿರುವುದು ಆತಂಕಕಾರಿಯಾಗಿದೆ.

ಬುಧವಾರ ಮುಂಜಾನೆ ಹಿರೇಮಕ್ಕಿಯ ಸತ್ಯನಾರಾಯಣ ಹೆಗಡೆ ಮೇಲೆ ದಾಳಿ ಮಾಡಿದ ಚಿರತೆ ಅದೇ ದಿನ ರಾತ್ರಿ‌ ರವಿ ಹೆಗಡೆ ಎನ್ನುವವರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಸಂತೆಗುಳಿ ಸಮೀಪ ಚಿರತೆ ದಾಳಿ ಮಾಡಿ ಕಾಲಿನ ಭಾಗಕ್ಕೆ ಗಾಯಗೊಳಿಸಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಭಾಗದಲ್ಲಿ ಒಮಮದು ತಿಂಗಳೊಳಗೆ ಮನುಷ್ಯರ ಮೇಲೆ ದಾಳಿ ಮಾಡಿದ ಮೂರನೇ ಪ್ರಕರಣ ಆಗಿರುದರಿಂದ ಈ ಭಾಗದ ಮೂಲಕ ಸಂಚರಿಸುವರಿಗೆ ಆತಂಕ ಎದುರಾಗಿದೆ.

ಗಮನಿಸಿ