suddibindu.in
ಹುಬ್ಬಳ್ಳಿ: ಚಾಲಕನ ನಿರ್ಲಕ್ಷ್ಯದಿಂದಾಗಿ ರಸ್ತೆಯಲ್ಲಿ ನಿಂತಿದ್ದ ಕುರಿ ಹಿಂಡಿನ ಮೇಲೆ ಲಾರಿ ಹರಿದ ಪರಿಣಾಮ ಹನ್ನೆರಡಕ್ಕೂ ಹೆಚ್ಚು ಜೀವಗಳು ಉಸಿರು ನಿಲ್ಲಿಸಿದ್ದು, ಹಲವು ಕುರಿಗಳು ನಿತ್ರಾಣಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಬಳಿಯಲ್ಲಿ ಘಟನೆ ನಡೆದಿದೆ.
ಲಾರಿ ಚಾಲಕ ಅತೀವೇಗ ಹಾಗೂ ನಿರ್ಲಕ್ಷ್ಯದಿಂದ ಲಾರಿ ಚಲಿಸಿಕೊಂಡು ಬಂದಿದ್ದು, ಈ ವೇಳೆ ಅಲ್ಲೆ ಪಕ್ಕದಲ್ಲಿದ್ದ ಕುರಿಗಳ ಹಿಂಡಿಗೆ ಡಿಕ್ಕಿ ಹಿಡೆದಿದ್ದಾನೆ.ಇದರಿಂದ 12ಕ್ಕೂ ಹೆಚ್ಚು ಕುರಿಗಳು ಜೀವ ಕಳೆದುಕೊಂಡಿದೆ.
ಇದನ್ನೂ ಓದಿ
- ರಸ್ತೆ ಬಿಟ್ಟು ಚಹಾ ಅಂಗಡಿಗೆ ಬಂದ ಬಸ್ : ಹೆಗಡೆ ರಸ್ತೆಯಲ್ಲಿ ಘಟನೆ
- School holiday/ ನಾಳೆ ಶಾಲೆ-ಅಂಗನವಾಡಿಗೆ ರಜೆ ಘೋಷಣೆ
- ಕರಾವಳಿಯ ಮೂರು ಜಿಲ್ಲೆಗೆ ರೆಡ್ ಅಲರ್ಟ್ : ಹವಮಾನ ಇಲಾಖೆ ಎಚ್ಚರಿಕೆ
ಘಟನೆ ಬಳಿಕ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಮುಧೋಳ ಮೂಲದ ಕುರಿಗಾರರು ಮಾಲೀಕರೆಂದು ಹೇಳಲಾಗಿದ್ದು, ಮತ್ತಷ್ಟು ಮಾಹಿತಿ ಸಿಗಬೇಕಿದೆ.