suddibindu.in
KUMTA:ಕುಮಟಾ : ಹೆದ್ದಾರಿಯಲ್ಲಿ ಹೋಗುತ್ತಿದ್ದ ಸ್ಕೂಟಿ ಸವಾರ ನೋರ್ವನಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಿರ್ಜಾನ ಬಳಿ ಕೋಟೆ ಕ್ರಾಸ್‌ನಲ್ಲಿ ನಡೆದಿದೆ.
ಅಪಘಾತದಲ್ಲಿ ಮೂಡಂಗಿ ನಿವಾಸಿಯಾಗಿರುವ ರವಿ ಪರಮೇಶ್ವರ ನಾಯ್ಕ, ಎಂಬಾತನೆ ಗಾಯಗೊಂಡ ಬೈಕ್ ಸವಾರನಾಗಿದ್ದಾನೆ.ಗೋಕರ್ಣಣದಿಂದ ಕುಮಟಾ ಕಡೆ ಚಲಿಸುತ್ತಿದ್ದ ಕೆಎಸ್‌ಆರ್ಟಿಸಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಗೋಕರ್ಣದ ಮೂಲದ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.ತಕ್ಷಣ ಆತನಿಗೆ ಕುಮಟಾ ಸರಕಾರಿ ಆಸ್ಪತ್ರೆಗೆ ಸೂಚಿಸಲಾಗಿದೆ.
ಇದನ್ನೂ ಓದಿ
- ಗೋ ಕಳ್ಳತನ ಪ್ರಕರಣ ಬಯಲು: ಭಟ್ಕಳದಲ್ಲಿ ಇಬ್ಬರು ಆರೋಪಿ ಬಂಧನ
- ಗೋ ಕಳ್ಳತನ ಪ್ರಕರಣ ಬಯಲು: ಭಟ್ಕಳದಲ್ಲಿ ಇಬ್ಬರು ಆರೋಪಿ ಬಂಧನ
- ಸಿಎಂ ಪತ್ನಿ ಪಾರ್ವತಿ ಆರೋಗ್ಯದಲ್ಲಿ ಏರುಪೇರು; ಶೇಷಾದ್ರಿಪುರಂ ಖಾಸಗಿ ಆಸ್ಪತ್ರೆಗೆ ದಾಖಲು
ಈತ ಕುಮಟಾ ಕಡೆಯಿಂದ ಗೋಕರ್ಣ ಹೋಗುವಾಗ ಮಿರ್ಜಾನ ಸಂತೆ ಮಾರ್ಕೇಟ್‌ನಲ್ಲಿ ತರಕಾರಿ ಖರೀದಿ ಮಾಡಿ ಗೋಕರ್ಣ ಕಡೆ ಚಲಿಸುವ ವೇಳೆ ಈ ಅಪಘಾತ ನಡೆದಿದೆ. ಅಪಘಾತದಿಂದ ಸ್ಕೂಟಿ ಬಸ್ ಮುಂಭಾಗದ ಅಡಿಯಲ್ಲಿ ಸಿಲುಕಿಕೊಂಡಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಟೆ ಕ್ರಾಸ್‌ನಲ್ಲಿ ನಿರಂತರ ಅಪಘಾತ
ಇಲ್ಲಿನ ಮಿರ್ಜಾನ ಕೋಟೆ ಕ್ರಾಸ್ ಬಳಿ ನಿರಂತರವಾಗಿ ಅಪಘಾತಗಳು ನಡೆಯುತ್ತಲೆ ಇದೆ. ಈ ಹಿಂದೆ ಸಹ ಸಾಕಷ್ಟು ಬಾರಿ ಅಪಘಾತ ಸಂಭವಿಸಿ ಪ್ರಾಣ ಕಳೆದುಕೊಂಡ ಉದಾರಣೆ ಇದೆ. ಕೋಟೆಗೆ ಹೋಗುವ ಕ್ರಾಸ್ ಸಮೀಪವೆ ಹೆದ್ದಾರಿಯ ಯೂರ್ಟನ್ ಇರುವುದರಿಂದಾಗಿ ಈ ಸ್ಥಳದಲ್ಲಿ ಹೆಚ್ಚಿನ ಅಪಘಾತ ನಡೆಯುತ್ತದೆ. ಹೀಗಾಗಿ ಇಲ್ಲಿ ಅವಶ್ಯಕವಾಗಿ ಬ್ಯಾರಿ ಗೇಟ್ ಹಾಕಬೇಕಿದೆ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.






