suddibindu.in
ಶಿವಮೊಗ್ಗ : ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ಯುವಕ ಸಾವನ್ನಪ್ಪಿದ ಘಟನೆ ರಿಪ್ಪನ್ಪೇಟೆಯ ಗವಟೂರಿನ ಹಳೂರು ಗ್ರಾಮದಲ್ಲಿ ನಡೆದಿದೆ..
ಕಾರ್ತಿಕ್ ಎಸ್ (19) ಮೃತಪಟ್ಟ ಯುವಕನಾಗಿದ್ದಾನೆ. ಬೆಳಗಿನಜಾವ ಈ ಘಟನೆ ನಡೆದಿದೆ. ಯುವಕ ಮನೆ ಎದುರಿನಲ್ಲಿ ಮೂತ್ರಕ್ಕೆ ಹೋಗಿದ್ದಾನೆ. ಮನೆ ಮುಂಭಾಗದ IBX ಬೇಲಿ ಬಳಿಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಕರೆಂಟ್ ಶಾಕ್ ಹೊಡೆದಿದೆ. ಮನೆ ಮುಂಭಾಗದ ಬೇಲಿ ಮೇಲೆ ವಿದ್ಯುತ್ ವೈರ್ ತುಂಡಾಗಿ ಬಿದ್ದಿತ್ತು. ಏಕಾಏಕಿ ವಿದ್ಯುತ್ ಶಾಕ್ ತಗುಲಿ ಯುವಕ ಬೇಲಿಯ ಮೇಲೆ ಬಿದ್ದಿದ್ದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾದರೂ ಯುವಕ ಬದುಕುಳಿಯಲಿಲ್ಲ.
ಇದನ್ನೂ ಓದಿ
- ಅಘನಾಶಿನಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು ಕಪ್ಪೆ ಚಿಪ್ಪು ತೆಗೆಯಲು ತೆರಳಿದ್ದ ಪಾಂಡುರಂಗ ಪಟಗಾರ ದುರಂತ ಅಂತ್ಯ
- ಬಾವಿಯಲ್ಲಿ ನೀರಲ್ಲ…ಎಣ್ಣೆ..! ನೀರಿಗೆ ಬೆಂಕಿ ಹಚ್ಚಿದರೆ ಉರಿಯುತ್ತೆ! ಶಿರಸಿಯಲ್ಲಿ ವಿಚಿತ್ರ ಘಟನೆ!!
- ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಜನ್ಮದಿನದ ಶುಭಾಶಯ ಕೋರಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ರೂಪಾಲಿ ನಾಯ್ಕ
ಮೃತ ಯುವಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಬಿಎ ವ್ಯಾಸಾಂಗ ಮಾಡುತಿದ್ದ.ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.




