suddibindu.in
ಶಿರಸಿ : ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ (Kumta Sirsi Highway Bandh) ಬಾಕಿ ಉಳಿದಿರುವ ಕಾಮಗಾರಿಯನ್ನ ಪೂರ್ಣಗೊಳಿಸಬೇಕಾಗಿರುವ ಕಾರಣ ನಾಲ್ಕು ತಿಂಗಳುಗಳ ಕಾಲ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲು ತೀರ್ಮಾನಿಸಲಾಗಿದೆ.
-ಕುಮಟಾ-ಶಿರಸಿ, ರಾಷ್ಟ್ರೀಯ ಹೆದ್ದಾರಿ-766ಇ ರಸ್ತೆಯ ಕಿ.ಮೀ 27.15 ರಿಂದ 60.00 ರ ವರೆಗಿನ ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಭಾರತ ಮಾಲಾ ಯೋಜನೆಯಡಿಯಲ್ಲಿ ಕಾಮಗಾರಿಯನ್ನ ಆರಂಭಿಸಲಾಗಿದ್ದು,ಇನ್ನೂ ಕೆಲವು ಕಡೆಯಲ್ಲಿ ಕಾಮಗಾರಿ ಬಾಕಿ ಇರುವ ಕಾರಣ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಬೇಕಾಗಿರುವ ಕಾರಣ ಬರಲಿದೆ ಅಕ್ಟೊಬರ್ 15-2024 ರಿಂದ 25 ಪೆಬ್ರವರಿ 25ರ ತನಕ ಸಂಪೂರ್ಣವಾಗಿ ಹೆದ್ದಾರಿಯನ್ನ ಬಂದ್ ಮಾಡಿ ಸೇತುವೆ ಹಾಗೂ ಹೆದ್ದಾರಿ ಕಾಮಗಾರಿಯನ್ನ ಕೈಗೊಳ್ಳಲಾಗುವುದು.ಈ ಸಮಯದಲ್ಲಿ ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ
- ಆಕಾಶದಲ್ಲೇ ಮಾನವೀಯತೆ: ವಿಮಾನದಲ್ಲಿ ಅಸ್ವಸ್ಥ ಮಹಿಳೆಯ ಪ್ರಾಣ ಉಳಿಸಿದ ಡಾ. ಅಂಜಲಿ ನಿಂಬಾಳ್ಕರ್
- Indian-Navy/ನೌಕಾನೆಲೆ ವಜ್ರಕೋಶದಲ್ಲಿ ರಹಷ್ಯ ಸ್ಪೋಟ ವಿಚಾರ : ನೌಕಾಪಡೆ ಸ್ಪಷ್ಟನೆ
- ಗೋಕರ್ಣದಲ್ಲಿ ಕಟ್ಟಿಗೆ ಮಿಲ್ಲಿಗೆ ಬೆಂಕಿ: ಲಕ್ಷಾಂತರ ಮೌಲ್ಯದ ಕಟ್ಟಿಗೆ ಭಸ್ಮ
ಬದಲಿ ಸಂಚಾರ ವ್ಯವಸ್ಥೆ
ಕುಮಟಾ-ಶಿರಸಿ ಮೂಲಕ ಸಿದ್ದಾಪುರ ಎಸ್.ಹೆಚ್-69 ಮಾರ್ಗವಾಗಿ ಲಘು ವಾಹನಗಳ ಸಂಚಾರ
ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ-63. ಮತ್ತು ಎಸ್.ಹೆಚ್-93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಕ್ಕೆ ಅವಕಾಶ.
ಮಂಗಳೂರು-ಹೊನ್ನಾವರ-ಶಿರಸಿ ಮೂಲಕ ಸಿದ್ದಾಪುರ ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದಾಗಿದೆ. ಕುಮಟಾ-ಕಾರವಾರ ಶಿರಸಿ ಮೂಲಕ ಯಾಣಾ ಮಾರ್ಗವಾಗಿ ಲಘುವಾಹನಗಳ ಸಂಚಾರಕ್ಕೆ ಅವಕಾಶ ಇರಲಿದೆ.
ಸಹಾಯಕ ಕಮೀಷನರ ಶಿರಸಿ ಹಾಗೂ ಕುಮಟಾ. ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ. ಲೋಕೋಪಯೋಗಿ ಇಲಾಖೆ ಶಿರಸಿ, ಪ್ರಾದೇಶಿಕ ಸಾರಿಗೆ ಅಧಿಕಾರಿರವರು ಸಲ್ಲಿಸಿದ ವರದಿ ಮೇಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ-766ಇ ರಸ್ತೆಯಲ್ಲಿನ ವಾಹನ ಸಂಚಾರ ನಿಷೇಧಿಸಿ ಬದಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ.





