suddibindu.in
ಧಾರವಾಡ : ಇಲ್ಲಿನ ಕೆಲಗೇರಿಯಲ್ಲಿರುವ ಸುತ್ತೂರು ಮಠದ ಜೆ ಎಸ್ ಎಸ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಅಪ್ಪಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ತಂದೆಯಂದಿರ ಮಹತ್ವದ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಸದುದ್ದೇಶದಿಂದ ತಂದೆಯಂದಿರ ಪಾದಪೂಜೆ ಮಾಡಿಸುವುದರ ಜೊತೆಗೆ ಮಕ್ಕಳಿಂದ ಭಾಷಣ, ಕಿರು ನಾಟಕ, ಡ್ಯಾನ್ಸ್ ಕೂಡ ಮಾಡಿ ಮಕ್ಕಳು ಸಂಭ್ರಮಿಸಿದರು.
ಆ ಬಳಿಕ ಶಾಲೆಯ ಜವಾನ ಜಂಬಪ್ಪ ವಿಜಾಪುರ ತಮ್ಮ ಇಬ್ಬರು ಮಕ್ಕಳಿಗಾಗಿ ಜವಾಬ್ದಾರಿಯುತ ತಂದೆಯಾಗಿ ಹೇಗೆ ದಿನದ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ದುಡಿಯುತ್ತಾನೆ ಎಂದು ತೋರಿಸು ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ
- ಮಗುವೇ ಸಾಲ ತೀರಿಸುವ ಸಾಧನವಾಗಿದೆಯಾ.?ಮನಕಲಕಿಸುವ ಪೋಷಕರ ನಿರ್ಧಾರ
- ಚಕ್ಕಡಿ ಗಾಡಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಹೊರಗಾಣಿಕೆ ತಂದ ದೇವಗಿರಿ ಕೂಟದ ಭಕ್ತರು
- ಲಂಚದ ಸರ್ಜನ್ಗೆ ‘ಪ್ರಮೋಷನ್’ : ಜೈಲಿನಲ್ಲಿ “ಶಿವ”..ಆನಂದ….!
ಈ ವೇಳೆ ಶಾಲೆಯ ವಿದ್ಯಾರ್ಥಿಗಳು ತಮ್ಮ ತಂದೆಯಂದಿರ ಸಾಧನೆಯನ್ನು ವಿವರಿಸಿ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಹಿರಿಯ ಪತ್ರಕರ್ತ ನಾಗರಾಜ ಕಿರಣಗಿ, ಮಕ್ಕಳು ತಮ್ಮ ತಂದೆ – ತಾಯಿಯ ಸ್ಥಾನಮಾನ, ಇತಿಮಿತಿಗಳನ್ನು ಅರಿತು, ಅವರ ಗೌರವ, ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಚೆನ್ನಾಗಿ ಓದಿ ಬೆಳೆದು ಶಾಲೆ ಹಾಗೂ ಊರಿನ ಗೌರವವನ್ನು ಹೆಚ್ಚಿಸಬೇಕು. ಬಾಲ್ಯಾವಸ್ಥೆಯಲ್ಲಿ ಯಾರೂ ಏನೇ ತಿಳುವಳಿಕೆ ನೀಡಿದರೂ ಮಕ್ಕಳು ಕೇಳುವ ಸ್ಥಿತಿಯಲ್ಲಿ ಇರಲ್ಲ. ಹೀಗಾಗಿ ಮಕ್ಕಳಿಗೆ ನಾವು ಸಾಧ್ಯವಾದಷ್ಟು ಇಂತಹ ಆಚಾರ, ವಿಚಾರ, ಸಂಸ್ಕಾರ ಗಳ ಮಹತ್ವವನ್ನು ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಜೆ ಎಸ್ ಎಸ್ ಪಬ್ಲಿಕ್ ಶಾಲೆ ವಿಶ್ವ ಅಪ್ಪಂದಿರ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸುವ ಮೂಲಕ ಮಕ್ಕಳ ಬದುಕಿನಲ್ಲಿ ತಂದೆ, ತಾಯಿ, ಗುರುಹಿರಿಯರ ಮಹತ್ವದ ಕುರಿತು ಅರಿವು ಮೂಡಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.ಅದಕ್ಕಾಗಿ ಶ್ರಮಿಸಿದ ಶಾಲೆ ಪ್ರಾಚಾರ್ಯರು, ಶಿಕ್ಷಕ ವೃಂದಕ್ಕೆ ಎಲ್ಲಾ ಪೋಷಕರ ಪರವಾಗಿ ಅಭಿನಂದಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಲೆ ಪ್ರಾಚಾರ್ಯರಾದ ನಾಗೇಂದ್ರ ಪ್ರಸಾದ ಮಾತನಾಡಿ, ಮಕ್ಕಳಿಗೆ ಚಿಕ್ಕವರಿದ್ದಾಗಲೇ ಇಂತಹ ಅರಿವು ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ ಶಾಲೆ ಹಾಗೂ ಸಂಸ್ಥೆ ನಿರಂತರವಾಗಿ ಶ್ರಮಿಸಲಿದೆ ಎಂದು ಹೇಳಿದರು.
ಶದ್ರಾ ದೇವರಾಜ್ ಎನ್, ವರ್ಷಣಿ ಶ್ರೀನಿವಾಸ ಕಲಘಟಗಿ,
ತ್ರೀಶಾ ಈಶ್ವರಗೌಡ ರಾಯನಗೌಡರ,ವಪ್ರಣತೀ ನೀಲಪ್ಪ ಕಜ್ಜರಿ ಯಶಸ್ವಿ ನಾಗರಾಜ ಕಿರಣಗಿ, ಮಹತಿ ಹಾಗೂ ದಿವ್ಯಲಕ್ಷ್ಮಿ
ನಾಗೇಂದ್ರ ಪ್ರಸಾದ ಅವರಿಗೆ ಪಾದಪೂಜೆ ಮೂಡಿ ಆರತಿ ಬೆಳಗಿ ಸಿಹಿ ತಿನ್ನಿಸಿ ಆರ್ಶೀವಾದ ಪಡೆದರು.