suddibindu.in
Sirsi:ಶಿರಸಿ:ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಶಿರಸಿಯ ಜೆ.ಎಮ್.ಎಫ್.ಸಿ ನ್ಯಾಯಾಲಯ(court) ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ದಂಡ ವಿಧಿಸಿದ ನ್ಯಾಯಾಲಯ 25ಸಾವಿರ ದಂಡ ವಿಧಿಸಲಾಗಿದೆ.
ಶಿರಸಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ನಾಗಪ್ಪ ಅವರು ತಮ್ಮ ವ್ಯಾಪ್ತಿಯ ಐದು ಸರ್ಕಲ್ ಬಳಿ ಮೇ 20 ರಂದು ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದಾಗ ಅಪ್ರಾಪ್ತ ಬಾಲಕ ನೊಂದಣಿಯಾಗದೇ ಇರುವ ಎನ್,ಎಸ್-200 ಪಲ್ಸರ್ ಬೈಕ್ನ್ನ (Pulsar bike) ಚಲಿಸಿಕೊಂಡು ಹೋಗುತ್ತಿದ್ದ,, ಬೈಕ್ ಚಾಲನೆ ಮಾಡಿದ ಅಪ್ರಾಪ್ತ ಬಾಲಕನ ತಂದೆ ಸೊರಬಾ ತಾಲೂಕಿನ ಗುತ್ತೆಮ್ಮ ದೇವಸ್ಥಾನ ಕ್ರಾಸ್ ನ ಕೇಶವ ನಿಂಗಪ್ಪ ರಾಡಗೇರ ಈತನ ಮೇಲೆ ಅಪ್ರಾಪ್ತ ಬಾಲಕನಿಗೆ ಮೋಟಾರ ಸೈಕಲನ್ನು ಸವಾರಿ ಮಾಡಲು ನೀಡಿದ ಅಪರಾಧದ ಕುರಿತು ನಗರ ಠಾಣೆ ಪಿ.ಎಸ್.ಐ ನಾಗಪ್ಪ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಪ್ರಿನ್ಸಿಪಲ್ ಜೆ.ಎಮ್.ಎಸ್.ಸಿ ನ್ಯಾಯಾಲಯಕ್ಕೆ ದೋಷಾರೂಪಣೆ ಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ
- PSI/ಪಿಎಸ್ಐ ಪತ್ನಿ ಆತ್ಮಹತ್ಯೆ
- ಯಲ್ಲಾಪುರ ಬಳಿ ಭೀಕರ ರಸ್ತೆ ದುರಂತ: ಬಸ್–ಲಾರಿ ಡಿಕ್ಕಿ, ಮೂವರು ಸಾವು – ಏಳು ಮಂದಿ ಗಂಭೀರ”
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
ಜೂ 11ರಂದು ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಾರದಾದೇವಿ ಹಟ್ಟಿ ಅವರು ಅಪ್ರಾಪ್ತ ಬಾಲಕನ ತಂದೆ ಕೇಶವ ತಂದೆ ನಿಂಗಪ್ಪ ರಾಡಗೇರ 25 ಸಾವಿರ ರೂ. ದಂಡ ವಿಧಿಸಿ ಆದೇಶಿದ್ದಾರೆ.