suddibindu. in
ಕಾರವಾರ: ಕೇಸರಿಯನ್ನ ಬಿಜೆಪಿಗೆ (BJP)ಯಾರು ಗುತ್ತಿಗೆ ಕೊಟ್ಟಿಲ್ಲ.ರಾಷ್ಟ್ರ ಧ್ವಜಕ್ಕೆ ನೂರಾರು ವರ್ಷದ ಇತಿಹಾಸವಿದೆ. ಅದರಲ್ಲಿಯೂ ಕೇಸರಿ ಇದೆ.ಕಾಂಗ್ರೆಸ್ ಧ್ವಜದಲ್ಲಿ ಕೇಸರಿ ಇದೆ.ಮೊದಲು ಇತಿಹಾಸ ತಿಳಿದುಕೊಳ್ಳಬೇಕೆಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಕೇಸರಿ ಬಣ್ಣದ ಮಹತ್ವ ಹೇಳಿದ್ದಾರೆ..
ಡಾ.ಅಂಜಲಿ ನಿಂಬಾಳ್ಕರ್ ಅವರ ನಾಮಪತ್ರ ಸಲ್ಲಿಕೆ ವೇಳೆಯಲ್ಲಿ ಕಾಂಗ್ರೆಸ್ನ ಮುಖಂಡರು ಹಾಗೂ ಮೆರವಣಿಗೆಯಲ್ಲಿದ್ದ ಸಾವಿರಾರು ಜನರು ಕೇಸರಿ ಪೇಟಾ ಹಾಗೂ ಸಾಲು ಹಾಕಿಕೊಂಡು ಮೆರೆವಣಿಗೆಯಲ್ಲಿ ಸಾಗುವ ಮೂಲಕ ಗಮನ ಸೆಳೆದಿದ್ದರು. ಮೆರವಣಿಗೆ ಬಳಿಕ ಕಾರವಾರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಇದನ್ನೂ ಓದಿ
- Cyclone/ವಾಯುಭಾರ ಕುಸಿತ ; ಉತ್ತರ ಕನ್ನಡದಲ್ಲಿ ಭಾರೀ ಗಾಳಿ-ಮಳೆ ಸಾಧ್ಯತೆ
- ಮನೆ ಕಳೆದುಕೊಂಡ ರಾಘವೇಂದ್ರ ನಾಯ್ಕರಿಗೆ ಅನಂತಮೂರ್ತಿ ಹೆಗಡೆ ಧನ ಸಹಾಯ
- Darshan arrest/ಕೊನೆಗೂ ನಟ ದರ್ಶನ ಆರೆಸ್ಟ್ : ಹೊಸಕೆರೆಹಳ್ಳಿಯಲ್ಲಿ ಬಂಧನ
ಕೇಸರಿ ಬಣ್ಣ ಬಿಜೆಪಿಗರು ಗುತ್ತಿಗೆ ಪಡೆದಿಲ್ಲ.ಅದು ನಮ್ಮ ಪೂರ್ವಜನರ ಬಲಿದಾನದ ಸಂಕೇತ. ಸ್ವಾತಂತ್ರ್ಯ ಹೋರಾಟಕ್ಕಾಗಿ ರಕ್ತ ತರ್ಪಣದ ಸಂಕೇತವಾಗಿ ರಾಷ್ಟ್ರಧ್ವಜದಲ್ಲಿ ಕೇಸರಿ ಇದೆ.ಕಾಂಗ್ರೆಸ್ ಧ್ವಜದಲ್ಲೂ ಇದೆ. ಯಾರೂ ಇತಿಹಾಸ ಮರೆಯಬಾರದು ಎಂದು ಅಂಜಲಿ ನಿಂಬಾಳ್ಕರ್ ಎಚ್ಚರಿಸಿದರು. ಈ ರೀತಿ ಬಣ್ಣದಲ್ಲಿ ರಾಜಕಾರಣ ಮಾಡಬಾರದು. ಬಿಜೆಪಿಗರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ಬಿಟ್ಟರೆ ಬೇರೆನು ಗೋತ್ತು.ಯಾರು ಕೂಡ ಇತಂಹ ದಾರಿ ತಪ್ಪಿಸುವವರ ಮಾತಿಗೆ ಮರುಳಾಗಬಾರದು ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕರಾದ ಸತೀಶ್ ಸೈಲ್, ಭೀಮಣ್ಣ ನಾಯ್ಕ, ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉಪಸ್ಥಿತರಿದ್ದರು.