ಸುದ್ದಿಬಿಂದು ಬ್ಯೂರೋ
ಶಿರಸಿ: ಜಗದೀಶ ಶೆಟ್ಟರ್ ಪಕ್ಷಕ್ಕೆ ವಾಪಸಾತಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ಬಂದಿದೆ ಎಂದು ಶಿವಮೊಗ್ಗ ಸಂದಸ ಬಿ. ವೈ ರಾಘವೇಂದ್ರ ಹೇಳಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿರಸಿಗೆ ಭೇಟಿ ನೀಡಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರು ಚರ್ಚೆ ಮಾಡಿ ಜಗದೀಶ ಶೆಟ್ಟರ್ ಅವರನ್ನು ವಾಪಸ್ ಕರೆ ತಂದಿದ್ದಾರೆ.ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ಬರಲಿದೆ. ಇನ್ನೂ ಅನೇಕರು ಪಕ್ಷದಿಂದ ದೂರವಾದವರು ಮತ್ತೆ ಮರಳಿ ಬರಳಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ರಾಜ್ಯದ 28 ಲೋಕಸಭಾ ಕ್ಷೇತ್ರ ಗೆಲ್ಲುವ ಮೂಲಕ ರಾಷ್ಟ್ರದ ಹಿತ ದೃಷ್ಟಿಯಿಂದ ಮೋದಿ ಸರಕಾರಕ್ಕೆ ಕೊಡುಗೆ ನೀಡುವ ವಿಶ್ವಾಸವಿದೆ ಎಂದರು.
ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬೆದರಿಕೆ ಒಡ್ಡುವ ಪದಗಳನ್ನು ಬಳಸಿರುವುದು ಏಕ ವಚನ ಪದಗಳನ್ನು ಉಪಯೋಗಿಸುವುದು ಗೌರವಯುತ ಬಂಗಾರಪ್ಪನರ ಪುತ್ರನಾಗಿ ಒಬ್ಬ ರಾಜ್ಯ ಸಚಿವನಾಗಿ ಮಧು ಬಂಗಾರಪ್ಪ ಅವರ ಘನತೆಗೆ ತಕ್ಕ ಮಾತಲ್ಲ. ಮಾತನಾಡುವಾಗಿ ಸ್ವಲ್ಪ ಹಿಡಿತ ಇಟ್ಟುಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷದವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದರು.
ಲೋಕಸಭೆಯಲ್ಲಿ 400ಕ್ಕೂ ಹೆಚ್ಚಿನ ಕ್ಷೇತ್ರದಲ್ಲಿ ರಾಷ್ಟ್ರದಲ್ಲಿ ಗೆಲ್ಲುವ ಮೂಲಕ ಜನರ ಬೆಂಬಲ ಸಿಗಲಿದೆ. ಮೋದಿ ಅವರ ನೇತೃತ್ವದಲ್ಲಿ ಮಾತ್ರ ಈ ದೇಶಕ್ಕೆ ಭವಿಷ್ಯ ತುಂಬಲು ಸಾಧ್ಯ. ಈ ಬಾರಿ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮೋದಿ ಅವರ ಆಡಳಿತ ಕಳೆದ ಹತ್ತು ವರ್ಷದಲ್ಲಿ ಸಾಧನೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿಯೂ ಪ್ರಧಾನಿ ಮೋದಿ ಅವರ ದೇಶ ಅತ್ಯುತ್ತಮ ನಿರ್ವಹಣೆ ಮಾಡಿ ಪ್ರಗತಿಯತ್ತ ದಾಪುಗಾಲು ಇಟ್ಟಿದೆ. ಮೋದಿ ಗ್ಯಾರಂಟಿ ಮುಂದೆ ಯಾವುದೇ ಗ್ಯಾರಂಟಿ ನಡೆಯೋದಿಲ್ಲ. ಭಾರತ ಅಭಿವೃದ್ಧಿ ಹೊಂದಿರುವ ಪಟ್ಟಿಯಲ್ಲಿ ಸೇರಬೇಕು ಎನ್ನುವ ಮೋದಿವರಿಗೆ ನಾವೆಲ್ಲ ಕೈಜೋಡಿಸಬೇಕಿದೆ ಎಂದರು.