suddibindu.in
ಕಾರವಾರ :ನಾನು ಎಂದು ರಾಜಕೀಯದಲ್ಲಿ ಪೊಟೋ ಹಾಕಿಸಿಕೊಂಡು ಬೆಳೆದು ಬಂದವನಲ್ಲ, ಪಕ್ಷದ ಹಾಗೂ ಅಭಿಮಾನಿಗಳ ಬೆಂಬಲದಿಂದಾಗಿ ಇಂದು ಜಿಲ್ಲೆಯಲ್ಲಿ ಗುರುತಿಸಿಕೊಂಡು ಬಂದಿರುವುದಾಗಿ ಲೋಕಸಭಾ ಚುನಾವ ಣೆಯ ಜೆಡಿಎಸ್ನ ಜಿಲ್ಲಾ ಉಸ್ತುವಾರಿ ಸೂರಜ್ ನಾಯ್ಕ ಸೋನಿ ಅವರು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ವಿಶ್ವೇಶ್ವರ ಹೆಗಡೆ ಅವರು ಇಂದು ತಮ್ಮ ಉಮೇದುವಾರಿಕೆಯನ್ನ ಸಲ್ಲಿಸಿದ್ದು, ಈ ವೇಳೆ ಅವರ ಪ್ರಚಾರದ ವಾಹನಕ್ಕೆ ಹಾಕಲಾಗಿದ್ದ ಬ್ಯಾನರ್ನಲ್ಲಿ ಸೂರಜ್ ನಾಯ್ಕ ಸೋನಿ ಅವರ ಪೋಟೋ ಹಾಕದೆ ಇರುವ ಬಗ್ಗೆ ಅವರ ಬೆಂಬಲಿಗರು ಅಸಮಧಾನ ವ್ಯಕ್ತಪಡಿಸಿದ್ದರು.ಈ ಬಗ್ಗೆ ಸುದ್ದಿ ಬಿಂದು ಕೂಡ ಸುದ್ದಿ ಪ್ರಕಟಿಸಿತ್ತು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸೂರಜ್ ನಾಯ್ಕ ಸೋನಿ ಅವರು.
ಇದನ್ನೂ ಓದಿ
- ಅನೈತಿಕ ಸಂಬಂಧ..ಕಾಡಿನಲ್ಲಿ ಭೀಕರ ಕೃತ್ಯ..!ಹಿಗ್ಗಾಮುಗ್ಗ ಥಳಿಸಿದ ವಿಡಿಯೋ ವೈರಲ್
- ಮೃತ ರಾಮಚಂದ್ರ ಗೌಡ ಮನೆಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ: ಸಾಂತ್ವನ ಹೇಳಿ ಧನಸಹಾಯ
- ಕಾಡುಪ್ರಾಣಿಯ ಮಾಂಸ ಸಾಗಾಟ: ದ್ವಿಚಕ್ರ ವಾಹನ ಸಹಿತ ಆರೋಪಿಯ ಬಂಧನ
ನಾನು ಎಂದು ಪೋಟೋ ಹಾಕಿಸಿಕೊಂಡು ಪ್ರಚಾರ ಪಡೆದು ರಾಜಕೀಯವಾಗಿ ಬೆಳೆದು ಬಂದಿಲ್ಲ. ಇಷ್ಟೊಂದು ಸಣ್ಣ ವಿಚಾರಕ್ಕೆ ಎಂದು ತಲೆಕೆಡಿಸಿಕೊಳ್ಳುವುದಿಲ್ಲ.ನನ್ನ ಅಭಿಮಾನಿಗಳು ಹಾಗೂ ಕ್ಷೇತ್ರದ ಮತದಾರರ ಬೆಂಬಲದಿಂದ ರಾಜಕೀಯವಾಗಿ ಇಂದು ಜಿಲ್ಲೆಯಲ್ಲಿ ಗುರುತಿಸಿಕೊಂಡು ಬಂದಿದ್ದೇನೆ. ನಮ್ಮ ಜೆಡಿಎಸ್ ಪಕ್ಷದ ನಾಯಕರಾಗಿರುವ ಕುಮಾರಸ್ವಾಮಿ ಅವರ ಸೂಚನೆಯ ಮೆರೆಗೆ ಮೈತ್ರಿ ಧರ್ಮವನ್ನ ಪಾಲಿಸಿಕೊಂಡು ಬಂದಿದ್ದೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ.
ಇತಂಹ ಘಟನೆಗಳು ನಡೆದಾಗ ಸಹಜವಾಗಿ ಬೆಂಬಲಿಗರಲ್ಲಿ ಅಸಮಧಾನ ಉಂಟಾಗುವುದು ಸಹಜ.ಆದರೆ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಮೈತ್ರಿ ಧರ್ಮವನ್ನ ಪ್ರಾಮಾಣಿಕವಾಗಿ ಪಾಲನೆ ಮಾಡುತ್ತೆನೆ. ನಾಮಪತ್ರ ಸಲ್ಲಿಕೆಗೆ ಐದು ಮಂದಿಗೆ ಮಾತ್ರ ಅವಕಾಶ ಇರುವ ಕಾರಣ ಹಾಗೂ ನನ್ನ ವೈಯಕ್ತಿಕ ಕಾರಣದಿಂದಾಗಿ ಕಾರವಾರದಿಂದ ಕುಮಟಾಕ್ಕೆ ವಾಪಸ್ ಬಂದಿರುವುದು ಬಿಟ್ಟರೆ ಬೇರೆ ಏನು ಇಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡವೆಂದು ಸೂರಜ್ ನಾಯ್ಕ ಸೋನಿ ಅವರು ಪ್ರತಿಕ್ರಿಯಿಸಿದ್ದಾರೆ.ಈ ಮೈತ್ರಿ ಧರ್ಮದಂತೆ ಈ ಭಾರಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗೆಲುವಿಗಾಗಿ ನನ್ನ ಕ್ಷೇತ್ರದಲ್ಲಿ ಶ್ರಮಿಸುತ್ತೆನೆ ಎಂದಿದ್ದಾರೆ.







